ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ

ಗುರುವಾರ, 20 ಆಗಸ್ಟ್ 2015 (09:39 IST)
ಹಿಮಾಚಲ ಪ್ರದೇಶದಲ್ಲಿ ಬುಧವಾರ - ಗುರುವಾರದ ನಡುರಾತ್ರಿ ಭೂಮಿ ನಡುಗಿದೆ. ಗಾಢ ನಿದ್ರೆಗೆ ಜಾರಿದ್ದ ಜನರಿಗೆ ತಡರಾತ್ರಿ 12.48ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಹವಾಮಾನ ಇಲಾಖೆ ನೀಡಿರುವ ಖಚಿತ ಮಾಹಿತಿಯ ಪ್ರಕಾರ ಮಂಡಿಯಿಂದ 31.7 ಡಿಗ್ರಿ ಉತ್ತರಕ್ಕೂ, 77 ಡಿಗ್ರಿ ಪೂರ್ವಕ್ಕೂ ಕಂಪನ ಕೇಂದ್ರಿಕೃತವಾಗಿತ್ತು.

ರಿಕ್ಟರ್ ಮಾಪನದಲ್ಲಿ ದಾಖಲಾಗಿರುವಂತೆ 4ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ. 
 
ಗಾಢ ನಿದ್ರೆಯಲ್ಲಿದ್ದ ಮಂಡಿಜಿಲ್ಲೆಯ ಜನರಿಗೆ ಭೂಕಂಪನದ ಅನುಭವವಾಗಿದೆ. ಗಾಬರಿಗೊಂಡು ಮನೆಯಿಂದ ಓಡಿ ಬಂದು ಬಯಲಲ್ಲಿ ಸೇರಿಕೊಂಡ ಜನರು ಮನೆ ಒಳಕ್ಕೆ ಮರಳಲು ಹೆದರಿ ಮುಂಜಾನೆಯವರೆಗೂ ಜಾಗರಣೆ ಮಾಡಿದ್ದಾರೆ. 
 
ಜೀವಹಾನಿ, ಆಸ್ತಿಪಾಸ್ತಿ ನಷ್ಟವಾದ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವೆಬ್ದುನಿಯಾವನ್ನು ಓದಿ