ನವದೆಹಲಿಯಲ್ಲಿ 6.8 ತೀವ್ರತೆಯ ಭೂಕಂಪ

ಭಾನುವಾರ, 10 ಏಪ್ರಿಲ್ 2016 (16:20 IST)
ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮತ್ತೆ, ಮತ್ತೆ ಭೂಕಂಪನದ ಅನುಭವ ಆಗಿದೆ ಎಂದು ತಿಳಿದುಬಂದಿದೆ. ಸುಮಾರು 4 ಗಂಟೆ ಒಂದು ನಿಮಿಷದ ಸುಮಾರಿಗೆ ಈ ಅನುಭವ ಉಂಟಾಗಿದೆ. ದೆಹಲಿ, ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪವಾಗಿದೆ ಎಂದು ಹೇಳಲಾಗುತ್ತಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 6.8 ರಷ್ಟಿತ್ತು ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಎರಡನೇ ಬಾರಿ ಒಂದು ನಿಮಿಷ ಕಾಲ ಭೂಮಿ ಕಂಪಿಸಿತು ಎಂದು ಗೊತ್ತಾಗಿದೆ.

  ಜಮ್ಮುಕಾಶ್ಮೀರ ಶ್ರೀನಗರ, ಚಂಡೀಗಢದಲ್ಲೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.  ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಸಂಚಾರವನ್ನು ರದ್ದುಮಾಡಿದೆ.  ಭೂಕಂಪದ ತೀವ್ರತೆ ಎಷ್ಟಿತ್ತು ಎನ್ನುವುದು ಇನ್ನೂ ವರದಿಯಾಗಿಲ್ಲ.  

ನಿರಂತರವಾಗಿ ಒಂದು ನಿಮಿಷದ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ. ಆಫ್ಘಾನಿಸ್ತಾನದ ಕಾಬೂಲ್‌ನಲ್ಲೂ ಭೂಕಂಪದ ಕೇಂದ್ರಬಿಂದು ದಾಖಲಾಗಿದ್ದು, ಕಾಬೂಲ್‌ನಲ್ಲಿ ಹೆಚ್ಚಿನ ಮಟ್ಟದ ಹಾನಿ ಸಂಭವಿಸಿರಬಹುದಾದ ಸಾಧ್ಯತೆಯಿದೆ. 

ವೆಬ್ದುನಿಯಾವನ್ನು ಓದಿ