ರಾಜಸ್ಥಾನದಲ್ಲಿ ಲಘು ಭೂಕಂಪ

ಶುಕ್ರವಾರ, 29 ಜನವರಿ 2016 (10:33 IST)
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು ಮುಂಜಾನೆ 4.17 ರ ಸುಮಾರಿಗೆ ಲಘು ಭೂಕಂಪದ ಅನುಭವವಾಗಿದೆ. ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 308ರಷ್ಟು ದಾಖಲಾಗಿದೆ.

ರಾಜಧಾನಿ ಜೈಪುರದ ಸಮೀಪ ಭೂಕಂಪದ ಕೇಂದ್ರ ಬಿಂದುವಾಗಿತ್ತು  ಎಂದು ಹವಾಮಾನ ಇಲಾಖೆ ಸ್ಪಷ್ಟ ಪಡಿಸಿದ್ದು ಇಲ್ಲಿಯವರೆಗೆ ಯಾವುದೇ ಸಾವು ನೋವು, ಆಸ್ತಪಾಸ್ತಿ ಹಾನಿ ವರದಿಯಾಗಿಲ್ಲ. 
 
ಜೈಪುರ ರಾಷ್ಟ್ರ ರಾಜಧಾನಿ ದೆಹಲಿಯಿಂದ ಕೇವಲ 260 ಕೀಲೋಮೀಟರ್ ದೂರದಲ್ಲಿದೆ.
 
ಜೈಪುರ ಅತಿ ಕಡಿಮೆ ಹಾನಿ ಭೂಕಂಪ ವಲಯ 2- ರಲ್ಲಿದೆ.

ವೆಬ್ದುನಿಯಾವನ್ನು ಓದಿ