ನಮ್ಮನ್ನು ಸಾಯಲು ಬಿಡಿ, ಇಲ್ಲವಾದ್ರೆ ಬದುಕಿಸಿ: ರಾಷ್ಟ್ರಪತಿಗೆ ಪತ್ರ ಬರೆದ ವ್ಯಾಪಂ ಆರೋಪಿಗಳು

ಗುರುವಾರ, 23 ಜುಲೈ 2015 (15:52 IST)
ನಕಲು ಮಾಡುವ ಮೂಲಕ ಪೂರ್ವ ವೈದ್ಯಕೀಯ ಪರೀಕ್ಷೆ ಪಾಸಾಗಿದ್ದ ಗ್ವಾಲಿಯರ್ ಮೂಲದ ಐವರು ಆರೋಪಿತ ವಿದ್ಯಾರ್ಥಿಗಳು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದು ನಮ್ಮನ್ನು ಸಾಯಲು ಬಿಡಿ, ಇಲ್ಲವಾದ್ರೆ ಬದುಕಿಸಿ ಎಂದು ಮೊರೆಹೋಗಿದ್ದಾರೆ.
 
ಮನೀಶ್ ಶರ್ಮಾ, ರಾಘವೇಂದ್ರ ಸಿಂಗ್, ಪಂಕಜ್ ಬನ್ಸಾಲ್, ಅಮಿತ್ ಚಡ್ಡಾ ಮತ್ತು ವಿಕಾಸ್ ಗುಪ್ತಾ ರಾಷ್ಟ್ರಪತಿಗೆ ಪತ್ರ ಬರೆದು ವಿಶೇಷ ತನಿಖಾ ತಂಡ ನಮ್ಮನ್ನು ಆರೋಪ ಮುಕ್ತಗೊಳಿಸಿದೆ. ಆದರೆ, ವ್ಯಾಪಂ ಹಗರಣದಲ್ಲಿ ಹಿಂದಿರುವ ಕಾಣದ ಕೈವಾಡಗಳು ನಮ್ಮನ್ನು ಹತ್ಯೆ ಮಾಡಲು ಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
 
ಗಾಜ್ರಾ ಮೆಡಿಕಲ್ ಕಾಲೇಜಿನ ಅಡಳಿತ ಮಂಡಳಿಯ ಅಧಿಕಾರಿಗಳು ದಿನನಿತ್ಯ ಕಿರುಕುಳ ನೀಡಿ ನಮ್ಮ ಜೀವನವನ್ನು ನರಕವಾಗಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. 
 
ಹುದ್ದೆಗಳ ನೇಮಕಾತಿಯಲ್ಲಿ ಭಾರಿ ನಡೆದ ಬಹುಕೋಟಿ ವ್ಯಾಪಂ ಹಗರಣದಲ್ಲಿ ಸುಮಾರು 3000 ಜನರಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮಧ್ಯಪ್ರದೇಶಧ ರಾಜದಾನಿ ಭೋಪಾಲ್‌ನಲ್ಲಿ ನಡೆಗ ವೃತ್ತಿಪರ ಪರೀಕ್ಷಾ ಮಂಡಳಿಯಲ್ಲಿ ಕಳೆದ 2007ರಲ್ಲಿಯೇ ಹಗರಣ ನಡೆದಿತ್ತು. ಆದರೆ, 2007ರಲ್ಲಿ ಹಗರಣ ಬೆಳಕಿಗೆ ಬಂದಿದೆ. 
 

ವೆಬ್ದುನಿಯಾವನ್ನು ಓದಿ