ರಾಜಕೀಯ ಪಕ್ಷಗಳ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗದಿಂದ ದಿನ ನಿಗದಿ
ಶನಿವಾರ, 20 ಮೇ 2017 (08:30 IST)
ನವದೆಹಲಿ: ದೇಶದ ವಿವಿಧ ರಾಜಕೀಯ ಪಕ್ಷಗಳಿಗೆ ಮತಯಂತ್ರಗಳನ್ನು ತಿರುಚುವ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಲಿದೆ.
ಎಎಪಿ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡಿದ್ದವು. ಇದನ್ನು ತಿರುಚಿ ತಮಗೆ ಬೇಕಾದಂತೆ ಮತ ಪಡೆಯಲು ಸಾಧ್ಯ ಎಂದು ಎಎಪಿ ದೆಹಲಿ ಸದನದಲ್ಲೇ ಪ್ರಾತ್ಯಕ್ಷಿಕೆ ನೀಡಿತ್ತು.
ವಿಪಕ್ಷಗಳ ಆರೋಪಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ಸಾಧ್ಯವಿದ್ದರೆ, ಇದುವರೆಗೆ ಮತದಾನದಲ್ಲಿ ಬಳಸಿದ ಯಂತ್ರವನ್ನೇ ತಿರುಚಿ ತೋರಿಸಲಿ ಎಂದು ಸವಾಲು ಹಾಕಿದೆ. ಅಲ್ಲದೆ ಇದಕ್ಕಾಗಿ ಒಂದು ದಿನ ನಿಗದಿಪಡಿಸಲಿದ್ದು ಅದು ಇಂದು ಘೋಷಣೆಯಾಗಲಿದೆ.
ಎಎಪಿ ಮತ್ತು ಬಿಎಸ್ ಪಿ ಹಾಗೂ ಕಾಂಗ್ರೆಸ್ ನ ಕೆಲ ನಾಯಕರು ಮತಯಂತ್ರಗಳ ಬಳಕೆಯನ್ನು ಪ್ರಮುಖವಾಗಿ ವಿರೋಧಿಸಿತ್ತು. ಬಿಜೆಪಿ, ಸಿಪಿಐಎಂ, ಡಿಎಂಕೆ, ಎನ್ ಸಿಪಿ ಮುಂತಾದ ಪಕ್ಷಗಳು ಮತಯಂತ್ರಗಳ ಬಳಕೆ ಸರಿ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ