ಲೋಕಸಭಾ ಮಹಾ ಚುನಾವಣೆಯ ಮತಗಣನೆ ಪ್ರಾರಂಭವಾಗಿದ್ದು, ಭಾರತದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಊಹಿಸಲ್ಪಟ್ಟಿರುವ ಬಿಜೆಪಿ ನಾಯಕ , ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಗಾಂಧೀನಗರದಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ದೂರದರ್ಶನವನ್ನು ವೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
63 ರ ಮೋದಿಗೆ ತಮ್ಮ ಮೈತ್ರಿಕೂಟ ಗೆಲುವನ್ನು ಸಾಧಿಸಲಿದೆಯೇ ಅಥವಾ ಇಲ್ಲವೇ ಎಂಬ ಸ್ಪಷ್ಪ ಚಿತ್ರಣ ಮಧ್ಯಾಹ್ನ 1 ಗಂಟೆಗೆ ದೊರೆಯಲಿದೆ. ಮೂಲಗಳ ಪ್ರಕಾರ ಅವರು ಫಲಿತಾಶ ಪ್ರಕಟವಾಗುವವರೆಗೂ ಮನೆಯಿಂದ ಹೊರಬರುವುದಿಲ್ಲ. ಫಲಿತಾಂಶ ಘೋಷಣೆಯಾದ ತರುವಾಯ ಅವರು ತಮ್ಮ ತಾಯಿಯನ್ನು ಭೇಟಿಯಾಗಿ, ವಡೋದರಾದಲ್ಲಿ ಸಮಾವೇಶವನ್ನು ನಡೆಸಲಿದ್ದಾರೆ.