ಮೊದಲ ಚುನಾವಣೆಯ ನಂತರ ಇಲ್ಲಿಯವರೆಗಿನ ದಾಖಲೆಯಲ್ಲಿ ಅತಿ ಕಡಿಮೆ ಎಂದರೆ 30 ಮುಸ್ಲಿಂ ಪ್ರತಿನಿಧಿಗಳು ಕಳೆದ ಬಾರಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಮತ್ತೂ ಇಳಿಕೆ ಕಂಡುಬಂದಿದ್ದು, ಜಯಗಳಿಸಿದ ಅಭ್ಯರ್ಥಿಗಳ ಸಂಖ್ಯೆ ಕೇವಲ 24. ಅಂದರೆ ಕೆಳಮನೆಯ ಬಲದಲ್ಲಿ ಅವರ ಪಾತ್ರ ಕೇವಲ 4.4%.
ಪ್ರಥಮ ಬಾರಿ ಉತ್ತರಪ್ರದೇಶದಿಂದ ಓರ್ವ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ ವ್ಯಕ್ತವಾಗಿದೆ. ಈ ಸಮುದಾಯದಿಂದ ಪ್ರತಿನಿಧಿಗಳು ಆಯ್ಕೆಯಾದ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ (ಎಂಟು), ಜಮ್ಮು ಕಾಶ್ಮೀರ (ನಾಲ್ಕು), ಬಿಹಾರ (ನಾಲ್ಕು), ಕೇರಳ (ಮೂರು), ಅಸ್ಸಾಂ (ಎರಡು) ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ (ಒಂದು). ಇವುಗಳಲ್ಲಿ, ಸಹಜವಾಗಿ ಜೆ & ಕೆ ಹಾಗೆಯೇ ಲಕ್ಷದ್ವೀಪ ಮುಸ್ಲಿಂ ಸಮುದಾಯ ಹೆಚ್ಚಳವಾಗಿರುವ ಪ್ರದೇಶಗಳಾಗಿವೆ.