ಮಗುವನ್ನು ಕ್ರೂರವಾಗಿ ಥಳಿಸಿದ್ದ ಶಿಕ್ಷಕಿಯ ಬಂಧನ

ಶನಿವಾರ, 26 ಜುಲೈ 2014 (09:10 IST)
ಮೂರುವರೆ ವರ್ಷದ ಮಗುವೊಂದನ್ನು ಕ್ರೂರವಾಗಿ ಥಳಿಸಿ, ತನ್ನ ಕೃತ್ಯ ಎಲ್ಲರಿಗೂ ತಿಳಿದ ಮೇಲೆ ಪರಾರಿಯಾಗಿದ್ದ ಮನೆಪಾಠದ ಶಿಕ್ಷಕಿ ಪೂಜಾ ಸಿಂಗ್ ಎಂಬಾಕೆಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ . ಆಕೆಯನ್ನು ಕೋಲಕಾತಾದ ರಾಸ್‌ಬಿಹಾರಿ ಅವೆನ್ಯೂ ಪ್ರದೇಶದಲ್ಲಿ ಶುಕ್ರವಾರ ಬಂಧಿಸಿರುವ ಬಿಧನ್ ನಗರ್ ಪೋಲಿಸರು ಆಕೆಯನ್ನು ಲೇಕ್ ಟೌನ್ ಪೋಲಿಸ್ ಠಾಣೆಗೆ ಕರೆತಂದಿದ್ದಾರೆ. ಆಕೆ ಪುಟ್ಟ ಮಗುವಿನ ಜತೆ ಕೆಟ್ಟದಾಗಿ ನಡೆಯುತ್ತಿರುವ ದ್ರಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. 

ಪರಾರಿಯಾಗಿದ್ದ ಆಕೆಗಾಗಿ ಕೋಲ್ಕತಾದ ಸಮೀಪದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವೃ ಶೋಧವನ್ನು ನಡೆಸಲಾಗಿತ್ತು . ಆಕೆಯನ್ನು ಬಿಧನ್ ನಗರ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ. 
 
ಮಗುವಿನ ಕುಟುಂಬದವರು ಶಿಕ್ಷಕಿಯನ್ನು ಕೆಲ ದಿನಗಳ ಹಿಂದಷ್ಟೇ ನೇಮಕ ಮಾಡಿಕೊಂಡಿದ್ದರು. ಲೇಕ್ ಟೌನ್ ಪ್ರದೇಶದಲ್ಲಿರುವ ಮನೆಯಲ್ಲಿ ಪುಟ್ಟ ಮಗುವನ್ನು ಆಕೆಯ ಶಿಕ್ಷಕಿ ನಿರ್ದಯವಾಗಿ ಹೊಡೆಯುತ್ತಿರುವ ದ್ರಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಾನು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿರುವ ಆಕೆ ಪೋಲಿಸರಲ್ಲಿ ದೂರು ನೀಡದಿರಿ ಎಂದು ಮನವಿ ಮಾಡಿಕೊಂಡಿದ್ದಳು. ಅವರು ಸಹ ಅಷ್ಟಕ್ಕೆ ಸುಮ್ಮನಾಗಿದ್ದರು.  ಆದರೆ ಆಕೆಯ ಗಂಡ ಮನೆಗೆ ಬಂದು ಮಗುವಿನ ತಂದೆ ತಾಯಿಗೆ ಬೆದರಿಕೆ ಹಾಕಿದ ನಂತರ  ಅವರು ಪೋಲಿಸರಲ್ಲಿ ದೂರು ದಾಖಲಿಸಿದ್ದರು. ನಂತರ ಆಕೆ ಪರಾರಿಯಾಗಿದ್ದಳು.
 
ಸಂಬಂಧಿಕರ ಮನೆಯಲ್ಲಿ ಅವಿತಿದ್ದ ಆಕೆಯನ್ನು ಶುಕ್ರವಾರ ಬಂಧಿಸಲಾಯಿತು.  ಶನಿವಾರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ. 
 
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಆಕೆಯ ಚಿತ್ರಹಿಂಸೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.  ಮಗುವಿನ ಎದೆಗೆ  ಕನಿಷ್ಠ ಎರಡು ಬಾರಿ ಒದ್ದಿದ್ದ ಆಕೆ, ಮಗುವಿನ ತಲೆಯನ್ನು ಹಾಸಿಗೆಗೆ ಅಪ್ಪಳಿಸಿದ್ದಲ್ಲದೇ, ಮುಖಕ್ಕೆ ಗುದ್ದಿದ್ದಳು.ಹಾಲುಗಲ್ಲದ ಹಸುಳೆ ದಯನೀಯವಾಗಿ ಬೇಡಿಕೊಂಡಿದ್ದರೂ ಆಕೆಯ ಹೃದಯ ಕರಗಿರಲಿಲ್ಲ. 
 
ಆಕೆಗಾಗಿ ಇತರ ರಾಜ್ಯಗಳಲ್ಲೂ ತೀವೃ ಶೋಧ ನಡೆಸಿದ್ದ ಪೋಲಿಸರು  ಆಕೆ ಮಕ್ಕಳ ವಿಷಯದಲ್ಲಿ ಪೈಶಾಚಿಕತೆಯನ್ನು ತೋರುತ್ತಿದ್ದಳು. ತನ್ನ ಮಕ್ಕಳನ್ನು ಮತ್ತು ಸಂಬಂಧಿಕರ ಮಕ್ಕಳನ್ನು ಸಹ ಅಮಾನುಷವಾಗಿ ಥಳಿಸುತ್ತಿದ್ದಳು ಎಂಬ ಮಾಹಿತಿ ದೊರೆಯಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ