ಲಾಲು ಯಾದವ್ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಗುರುವಾರ, 21 ಏಪ್ರಿಲ್ 2016 (18:11 IST)
ಆರ್‌ಜೆಡಿ ಪಕ್ಷದ ಸಂಸ್ಥಾಪಕ ಲಾಲುಪ್ರಸಾದ್ ಯಾದವ್ ಅವರ ಫೇಸ್‌ಬುಕ್ ಮತ್ತು ಇ-ಮೇಲ್ ಖಾತೆಯನ್ನು ಹ್ಯಾಕ್ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಯಾದವ್ ಅವರ ಫೇಸ್‌ಬುಕ್ ಖಾತೆಯನ್ನು ದುಷ್ಕರ್ಮಿಗಳು ಮಾರ್ಚ್‌ 13 ರಂದು ಹ್ಯಾಕ್ ಮಾಡಿದ್ದರು. ಈ ಕುರಿತು ಯಾದವ ಅವರ ಪುತ್ರನಾದ ಉಪ ಮುಖ್ಯಮಂತ್ರಿ ಸಿಎಂ ತೇಜಸ್ವಿ ಪ್ರಸಾದ್, ಐಪಿಸಿ ಸೆಕ್ಷನ್ 419, 420 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 
 
ಈ ಪ್ರಕರಣ ಕುರಿತಂತೆ, ತನಿಖಾಧಿಕಾರಿಗಳಾದ ಎಎಸ್‌ಪಿ ನೀಲೇಶ್ ಕುಮಾರ್ ಮತು ಇನ್ಸಪೆಕ್ಟರ್‌ ರಮಾಶಂಕರ್ ಸಿಂಗ್ ತನಿಖೆಯ ಬಗ್ಗೆ ಮಾಹಿತಿ ನೀಡಿ ಮೊಬೈಲ್ ಪೋನ್‌ ಮೂಲಕ ಖಾತೆ ಹ್ಯಾಕ್ ಮಾಡಲಾಗಿದೆಯೇ ಹೊರತು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಿಂದ ಹ್ಯಾಕ್ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. 
 
ಮೊಬೈಲ್ ಪೋನ್‌ ಮೂಲಕ ಮಾಡಿರುವ ಸೈಬರ್ ಕ್ರೈಮ್ ಮಾಡಿದರೆ, ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ. ಬಂಧಿತ ಎಂಜನೀಯರಿಗ್ ವಿದ್ಯಾರ್ಥಿ, ಮಾರ್ಚ್ 8 ಮತ್ತು 11 ರಂದು  ಖಾತೆ ಹ್ಯಾಕ್ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದು, ಮಾರ್ಚ್ 13 ರಂದು ಲಾಲುಪ್ರಸಾದ್ ಯಾದವ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸ್ ಮಹಾನಿರ್ದೇಶಕ ಜೆ ಎಸ್ ಗಂಗ್ವಾರ್ ತಿಳಿಸಿದ್ದಾರೆ.
 
ಬಂಧಿತ ಆರೋಪಿಯನ್ನು ಪಾಟ್ನಾ ಸಾಹಿಬ್ ಎಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿ ದಿವ್ಯಾಂಶು ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿ ಬಳಿ ಇದ್ದ ಎರಡು ಉನ್ನತ ಸ್ಮಾರ್ಟ್‌ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಳುಸುತ್ತಿದ್ದ ಸಿಮ್ ಕಾರ್ಡ್, ದುಬೈನಲ್ಲಿ ನೆಲಿಸಿರುವ ವಿಜಯ್ ಕುಮಾರ್ ಎಂಬ ವ್ಯಕ್ತಿಯ ಹೆಸರಿನಲಿತ್ತು. ಆದರೆ ಬಹಳಷ್ಟು ದಿನಗಳಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ದಿವ್ಯಾಂಶು ಈ ಸಿಮ್ ಕಾರ್ಡ್‌ನ್ನು ಬಳಸುತ್ತಿದ್ದ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ