ಸಂಪೂರ್ಣ ಭಾರತೀಯ ಸೇನೆ ಬಂದರೂ ಕಾಶ್ಮಿರದಲ್ಲಿ ಉಗ್ರರನ್ನು ತಡೆಯಲು ಸಾಧ್ಯವಿಲ್ಲ: ಫಾರೂಕ್ ಅಬ್ದುಲ್ಲಾ

ಶನಿವಾರ, 28 ನವೆಂಬರ್ 2015 (15:27 IST)
ಕಾಶ್ಮಿರ ವಿಷಯ ಕುರಿತಂತೆ ನಿನ್ನೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಸಂಪೂರ್ಣ ಭಾರತೀಯ ಸೇನೆ ಬಂದರೂ ಕಾಶ್ಮಿರದಲ್ಲಿ ಉಗ್ರರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
 
ಭಾರತದ ಸಂಪೂರ್ಣ ಸೇನೆ, ಕಾಶ್ಮಿರದಲ್ಲಿ ಕಾರ್ಯಾಚರಣೆಗಿಳಿದರೂ ಪಾಕಿಸ್ತಾನದ ಉಗ್ರರನ್ನು ತಡೆಯಲು ಸಾಧ್ಯವಿಲ್ಲ ಎಂದು ಫಾರೂಕ್ ಹೇಳಿಕೆ ನೀಡಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
 
ನಿನ್ನೆಯಷ್ಟೆ, ಪಾಕ್ ಆಕ್ರಮಿತ ಕಾಶ್ಮಿರ ಪಾಕಿಸ್ತಾನದ ಭಾಗವಾಗಿದ್ದು, ಕಾಶ್ಮಿರದ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿಕೆ ನೀಡಿದ್ದರು. ನಾನು ನೀಡಿದ ಹೇಳಿಕೆ ಹೊಸತೇನಲ್ಲ ಎಂದು ಇಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
ಕಾಶ್ಮಿರ ವಿವಾದ ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆಯೇ ಪರಿಹಾರ. ಉಭಯ ದೇಶಗಳ ಪರಸ್ಪರ ಜನಸಂಪರ್ಕದಿಂದ ಭೀತಿಯನ್ನು ಹೊಡೆದೊಡಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ