ಇಂದಿಗೂ ನನ್ನನ್ನು ಅಸ್ಪೃಶ್ಯನಂತೆ ಕಾಣಲಾಗುತ್ತದೆ: ಬಿಹಾರ್ ಮುಖ್ಯಮಂತ್ರಿ

ಸೋಮವಾರ, 29 ಸೆಪ್ಟಂಬರ್ 2014 (11:32 IST)
ರಾಜ್ಯದ ಮುಖ್ಯಮಂತ್ರಿಯೇ ಅಸ್ಪೃಶ್ಯತೆಯ ಮೌಢ್ಯಕ್ಕೆ ಒಳಗಾದರೆ, ಸಾಮಾನ್ಯರ ಪರಿಸ್ಥಿತಿ ಇನ್ನೇನಾಗಬಹುದು....! ಇದಕ್ಕೊಂದು ತಾಜಾ ಉದಾಹರಣೆ ಬಿಹಾರ ಸಿಎಂ ಜೀತನ್ ರಾಂ ಮಾಂಝಿ.

''ಇತ್ತೀಚೆಗೆ ಕೆಲವರು ಪೂಜೆಯಲ್ಲಿ ಭಾಗವಹಿಸಲು ವಿಶೇಷವಾಗಿ ನನ್ನನ್ನು ಆಹ್ವಾನಿಸಿದ್ದರು. ನಾನು ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಹೊರಟ ಬಳಿಕ ತಮ್ಮ ದೇವರ ವಿಗ್ರಹಗಳು ಮತ್ತು ಮನೆಯನ್ನು ಶುದ್ಧೀಕರಿಸಿದರು ಎಂದು ಹಿರಿಯ ಮುಖಂಡ ರಾಮ ಲಖನ್ ರಾಮ್ ಆನಂತರ ನನಗೆ ತಿಳಿಸಿದರು,'' ಎಂದು ತಮ್ಮ ನೋವನ್ನವರು ಹಂಚಿಕೊಂಡಿದ್ದಾರೆ.
 
"ಈ ಘಟನೆಗೆ ಸಂಬಂಧಿಸಿದಂತೆ ನಾನು ದೇವಸ್ಥಾನದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯನ್ನು ಜವಾಬ್ದಾರರನ್ನಾಗಿಸುವುದಿಲ್ಲ. ಬದಲಿಗೆ ಅದು ಅಲ್ಲಿಯ ಜನರ ಮನಸ್ಥಿಯ ದ್ಯೋತಕವಾಗಿದೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು ಈ ಆಧುನಿಕ ಯುಗದಲ್ಲಿಯೂ ಮುಂದುವರಿಯುತ್ತಿರುವುದು ಬೇಸರದ ಸಂಗತಿ. ಅಷ್ಟಕ್ಕೂ ಮೇಲ್ವರ್ಗದವರು ತಮ್ಮ ಕೆಲಸವಾಗಬೇಕಾದಾಗ, ಕೆಳವರ್ಗದವರ ಕಾಲಿಗೆ ಬೀಳಬೇಕಾಗುತ್ತದೆ. ಬೀಳುತ್ತಾರೆ. ಮೇಲ್ವರ್ಗ, ಕೆಳವರ್ಗ  ಎಂಬ ಹೀನ ಸಂಸ್ಕೃತಿಯೇ ಇದಕ್ಕೆ ಕಾರಣವಾಗಿದೆ" ಎಂದು ಮಾಂಝಿ  ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ