16 ನೇ ಲೋಕಸಭೆಯ ಮೂರನೇ ಒಂದರಷ್ಟು ಸಂಸದರ ಮೇಲಿದೆ ಕ್ರಿಮಿನಲ್ ಕೇಸ್

ಸೋಮವಾರ, 19 ಮೇ 2014 (16:37 IST)
2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 543 ಸಂಸದರಲ್ಲಿ 541 ಮಂದಿ  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಸ್ವಯಂ ಅಪಿಡವಿಟ್‌ನ್ನು ವಿಶ್ಲೇಷಿಸಿರುವ ಸಿವಿಲ್ ಸೊಸೈಟಿ ಗ್ರುಪ್ ಎಡಿಆರ್, ವಿಜಯಿ ಅಭ್ಯರ್ಥಿಗಳಲ್ಲಿ ಪ್ರತಿಶತ 34 ರಷ್ಟು ಜನ  ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ. 2009ರಲ್ಲಿ ಈ ಸಂಖ್ಯೆ 30 ಪ್ರತಿಶತವಿದ್ದರೆ, 2004ರಲ್ಲಿ 24% ರಷ್ಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 
 
ಗೆದ್ದ 541 ಅಭ್ಯರ್ಥಿಗಳಲ್ಲಿ, 186 (34%) ಜನ ಕ್ರಿಮಿನಲ್ ಅಪರಾಧದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂತು ಎಂದು ಎಡಿಆರ್ ತನ್ನ ವಿವರಣಾತ್ಮಕ ವಿಶ್ಲೇಷಣೆಯಲ್ಲಿ ಹೇಳಿದೆ. 
 
ಅದರಲ್ಲಿ ಬಿಜೆಪಿಯ ಮೊದಲ ಸ್ಥಾನದಲ್ಲಿದ್ದು, ಪಕ್ಷದ 282 ವಿಜೇತ ಉಮೇದುವಾರರಲ್ಲಿ 98 ಜನ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. 
 
ಕಾಂಗ್ರೆಸ್ಸಿನ 44 ಸಂಸದರಲ್ಲಿ 8 ಜನ  ಎಐಡಿಎಂಕೆಯ 37 ಸಂಸದರಲ್ಲಿ 6 ಜನ ಕ್ರಿಮಿನಲ್ ಕೇಸ್‌ ದಾಖಲಿಸಲ್ಪಟ್ಟವರ ಸಾಲಲ್ಲಿ ಸೇರಿದ್ದಾರೆ.  
 
ಶೇಕಡಾವಾರು ಪರಿಗಣಿಸಿದರೆ ಶಿವಸೇನೆ ಎಲ್ಲರಿಗಿಂತ ಮುಂದಿದ್ದು ಗೆದ್ದಿರುವ 18 ಉಮೇದುವಾರರಲ್ಲಿ 15 ಜನ ಅಪರಾಧಿ ಪ್ರಕರಣದ ಅಡಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ