ಭೃಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾದ ಮಾಜಿ ಕೇಂದ್ರ ಸಚಿವ

ಮಂಗಳವಾರ, 28 ಜುಲೈ 2015 (16:55 IST)
ಸರ್ಕಾರದ 2 ಕೋಟಿ ರೂಪಾಯಿಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಕೆ. ತುಂಗನ್ ಅವರಿಗೆ ದೆಹಲಿ ಹೈಕೋರ್ಟ್ ನಾಲ್ಕುವರೆ ವರ್ಷಗಳ ಜೈಲುವಾಸವನ್ನು ವಿಧಿಸಿದೆ. 

ವಿಶೇಷ ಸಿಬಿಐ ನ್ಯಾಯಾಧೀಶರಾದ ಅಜಯ್ ಕುಮಾರ್ ಜೈನ್  68 ವರ್ಷದ ತುಂಗನ್ ಅವರಿಗೆ ಸೆರೆವಾಸದ ಜತೆಗೆ 10,000 ರೂಪಾಯಿ ದಂಡವನ್ನು  ಸಹ ವಿಧಿಸಿದ್ದಾರೆ.  ತುಂಗನ್ ಅರುಣಾಚಲಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. 
 
ಇದೇ ಪ್ರಕರಣದ ಮತ್ತಿಬ್ಬರು ಅಪರಾಧಿಗಳಿಗಾದ ತಾಲಿ ಎಒ ಮತ್ತು ಸಿ.ಸಂಗೀತ್ ಅವರಿಗೆ ಕೋರ್ಟ್ ಮೂರುವರೆ ವರ್ಷಗಳ ಜೈಲುವಾಸ ಮತ್ತು ನಾಲ್ಕನೆಯ ಆರೋಪಿ ಮಹೇಶ್ ಮಹೇಶ್ವರಿಗೆ ಎರಡುವರೆ ವರ್ಷಗಳ ಸೆರೆವಾಸವನ್ನು ನೀಡಿದೆ. 
 
ತಾಲಿಗೆ 6,000, ಸಂಗೀತ್ ಮತ್ತು ಮಹೇಶ್ವರಿಗೆ 4,000 ರೂಪಾಯಿಗಳ ದಂಡವನ್ನು ಸಹ ವಿಧಿಸಲಾಗಿದೆ. 
 
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಮತ್ತು ಕೇಂದ್ರದಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ತುಂಗನ್ ಇಂತಹ ಉನ್ನತ ಅಧಿಕಾರವನ್ನೂ ನಿರ್ವಹಿಸಿದ್ದರೂ ಸಹ ಅಪರಾಧವನ್ನುಎಸಗಿರುವುದು ವಿಪರ್ಯಾಸ  ಎಂದು ಸಂಸ್ಥೆ ಅಭಿಯೋಜಕರು ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ