ಫೇಸ್‌ಬುಕ್‌‌ನಲ್ಲಿ ನಿಮ್ಮ ಪಾಸ್‌‌ವರ್ಡ್‌ ಹ್ಯಾಕ್‌ ಮಾಡುವವರಿದ್ದಾರೆ ಎಚ್ಚರ !

ಗುರುವಾರ, 31 ಜುಲೈ 2014 (19:27 IST)
ಫೇಸ್‌‌ಬುಕ್‌‌ನಲ್ಲಿ ನಿಮ್ಮ ಪಾಸ್‌ವರ್ಡ್‌ ಅಪಾಯದಲ್ಲಿದೆ ಕೆಲವು ನಕಲಿ ಖಾತೆ ಹೊಂದಿರುವವರು ಬಳಕೆದಾರನ್ನು ಮುರ್ಖರನ್ನಾಗಿಸಿ ಪಾಸ್‌ವರ್ಡ್‌ ಮತ್ತು ಎಲ್ಲಾ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.  
 
ಪತ್ರಿಕೆಯ ಪ್ರಕಾರ ಫೇಸ್‌‌ಬುಕ್‌‌ ಬಳಕೆದಾರರಿಗೆ ತಮ್ಮ ಗೆಳೆಯರ ಮತ್ತು ಸಂಬಂಧಿಗಳ ಪಾಸವರ್ಡ್‌ ಪಡೆಯಲು ನಕಲಿ ಖಾತೆಹೊಂದಿರುವವರು ಪ್ರೇರೇಪಿಸಿ ಇದರಿಂದ ಫೇಸ್‌‌ಬುಕ್‌ ಅಕೌಂಟ್‌‌ ಹ್ಯಾಕ್‌‌ ಮಾಡಿಕೊಳ್ಳಬಹುದು ಎನ್ನುವ ಸಂದೇಶ ಅವರ ಫೇಸ್‌ಬುಕ್ ಟೈಮ್‌ಲೈನ್‌ ಮೇಲೆ ಬರುತ್ತದೆ. 
 
ಅಕೌಂಟ್‌ ಹ್ಯಾಕ್‌ ಮಾಡಲು ಇವರು ಮೂರು ಸುಲಭದ ಹಂತಗಳನ್ನು ಹೇಳುತ್ತಾರೆ. ಫೇಸ್‌ಬುಕ್‌, ವೆಬ್‌ ಬ್ರೌಸರ್‌‌ಗಳಾದ ಗೂಗಲ್‌ ಕ್ರೋಮ್‌ ಮತ್ತು ಮೋಜಿಲಾ ಫೈರ್‌ಫಾಕ್ಸ್‌‌ನಲ್ಲಿ ಓಪನ್‌‌ ಮಾಡಿ ಅಕೌಂಟ್ ಹ್ಯಾಕ್ ಮಾಡಲು ಬಯಸುವವರ. ಪ್ರೋಫೈಲ್‌‌ ಓಪನ್ ಮಾಡಿ, ನಂತರ ಮೌಸ್‌‌ನಿಂದ ರೈಟ್‌ ಕ್ಲಿಕ್‌‌ ಮಾಡಲು ತಿಳಿಸುತ್ತಾರೆ. ನಂತರ ಇನ್ಸಪೆಕ್ಟ್‌ ಎಲಿಮೆಂಟ್‌ ಸಲೆಕ್ಟ್‌‌ ಮಾಡಲು ಹೇಳುತ್ತಾರೆ ಆಗ ವೆಬ್‌‌ಪೇಜ್‌ನ HTML ಎಡಿಟರ್‌‌ ತೆರೆದುಕೊಳ್ಳುತ್ತದೆ. 
 
 ಬೇರೊಬ್ಬರ ಪ್ರೊಫೈಲ್ ಹ್ಯಾಕ್‌ ಮಾಡಲು HTML ಎಡಿಟರ್‌‌ನಲ್ಲಿ ಒಂದು ವಿಶೇಷ ಕೋಡ್ ಟೈಪ್ ಮಾಡಲು ತಿಳಿಲಾಗುತ್ತದೆ. ಬಳಕೆದಾರ ಕೆಲವು ಕೋಡ್‌ ಟೈಪ್‌ ಮಾಡಿದಾಗ ಆತನದೇ ಪ್ರೊಫೈಲ್‌ ಹ್ಯಾಕ್ ಆಗಿರುತ್ತದೆ ಆಗ ನಕಲಿ ಖಾತೆ ಹೊಂದಿರುವವರಿಗೆ ಬಳಕೆದಾರರ ಪಾಸ್‌ವರ್ಡ್‌ ಲಭಿಸುತ್ತದೆ. 
 
ಇದರ ನಂತರ ನಕಲಿ ಖಾತೆಹೊಂದಿರುವವರು ಕೆಲವು ಡೆಟಾ ಕದಿಯುತ್ತಾರೆ. ಇದಕ್ಕಾಗಿ ಜನರಿಗೆ ಪುಸಲಾಯಿಸುವುದು ಮತ್ತು ಬಳಕೆದಾರನ್ನು ಬೇಟೆಯ ವಸ್ತುವನ್ನಾಗಿರುತ್ತಾರೆ. 
 
ನಕಲಿ ಖಾತೆ ಹೊಂದಿರುವವರು ಹ್ಯಾಕ್‌ ಮಾಡಲು ಸೆಲ್ಫ್‌‌ ಎಕ್ಸ್‌‌ಎಸ್‌ಎಸ್‌‌ ಬಳಕೆ ಮಾಡುತ್ತಾರೆ. ಇದು ವೆಬ್‌‌ ಬ್ರೌಸರ್‌‌‌‌ನಲ್ಲಿ ಬಳಕೆದಾರರನ್ನು ಮೋಸಮಾಡುವ ತಂತ್ರವಾಗಿದೆ. ಇದಕ್ಕಾಗಿ ನಕಲಿ ಖಾತೆ ಹೊಂದಿರುವವರ ಬಗ್ಗೆ ಮತ್ತು ಅವರ ಸಲಹೆಯ ಬಗ್ಗೆ ಎಚ್ಚರಿಂದ ಇರಿ. 

ವೆಬ್ದುನಿಯಾವನ್ನು ಓದಿ