ಫೇಸ್‌‌‌ಬುಕ್‌‌ನಲ್ಲಿ ಹುಟ್ಟಿತು ಪ್ರೀತಿ: ಪ್ರೀಯಕರನೊಂದಿಗೆ ತರಕಾರಿ ಮಾರಲು ಸಿದ್ದಳಾದ ಪ್ರೀಯತಮೆ

ಗುರುವಾರ, 28 ಆಗಸ್ಟ್ 2014 (19:26 IST)
ಒಂದು ತಿಂಗಳ ಮೊದಲು ಸೋಶಿಯಲ್‌ ಸೈಟ್‌ ಆದ ಫೇಸ್‌‌ಬುಕ್‌‌‌‌ನಲ್ಲಿ ಪ್ರೇಮವಾದ ನಂತರ ಯುವತಿಯೊಬ್ಬಳು ಛತ್ತಿಸಘಡ್‌‌‌ದ ಬಿಲಾಸಪುರ್‌ ದಿಂದ 850 ಕಿಲೋಮೀಟರ್‌ ದೂರದ ನಗರಕ್ಕೆ ತಲುಪಿದ್ದಾಳೆ. ಯುವತಿಯ ಪ್ರೀಯತಮ ಆಕೆಯನ್ನು ಮನೆಗೆ ಕರೆದುಕೊಂಡು ಹೋದಾಗ ಯುವಕನ ಕುಟುಂಬದವರು ಇವರ ಪ್ರೇಮವನ್ನು ನಿರಾಕರಿಸಿದ್ದಾರೆ ಮತ್ತು ಈ ಮಾಹಿತಿಯನ್ನು ನಿರ್ಭಯಾ ತಂಡಕ್ಕೆ ನೀಡಿದ್ದಾರೆ. ಯುವತಿ ವಯಸ್ಕಳಾಗಿದ್ದರಿಂದ ಆಕೆಯನ್ನು ಯುವಕನ ಕುಟುಂಬದವರ ಜೊತೆಗೆ ಇರುವಂತೆ ನಿರ್ಭಯಾ ತಂಡ ನಿರ್ದೇಶನ ನೀಡಿದೆ. 
 
ಈ ಪ್ರಕರಣ ನಗರದ ತಿರಗೋಲೆಯ ಹಿಂದಿರುವ ಕುಂದನ್‌‌ ನಗರದ್ದಾಗಿದೆ. ನಗರದ ಜಿತೇಂದ್ರ ಕುಶಾವಾಹ್‌ ಮತ್ತು ಬಿಜಾಸ್‌ಪುರದ ತುಶಿಲಾ ತಂದೆ ಮಂತರಾಮ್‌ ಪಾಟ್ಲೆಯವರ ಸ್ನೇಹ ಎರಡು ತಿಂಗಳಿಗಳ ಹಿಂದೆ ಫೇಸ್‌‌‌ಬುಕ್‌‌ನಲ್ಲಿ ಆಗಿತ್ತು. ಇದರ ನಂತರ ಇವರ ಪ್ರೀತಿ ಯಾವ ಮಟ್ಟಿಗೆ ಬೆಳೆಯಿತು ಎಂದರೆ, ಯುವತಿ ತನ್ನ ಕುಟುಂಬದವರಿಗೆ ಹೇಳದೆನೇ  ಇಂದೋರ್‌‌ಗೆ ತೆರಳಿದ್ದಾಳೆ. ಇಂದೋರ್‌‌ಗೆ ಹೋದ ನಂತರ ಬಡವಾನಿಗೆ ತಲುಪಿದ್ದಾಳೆ. ಜಿತೇಂದ್ರನ ಕುಟುಂಬ ತರಕಾರಿ ಮಾರಿ ಜೀವನ ಸಾಗಿಸುತ್ತಾರೆ, ಇದನ್ನು ನೋಡಿದ ತುಶಿಲಾ ಕೂಡ ತರಕಾರಿ ಮಾರಲು ಸಿದ್ದಳಾಗಿದ್ದಾಳೆ. 
 
ಯುವಕ ಆಕೆಯನ್ನು ಮನೆಗೆ ಕರೆದುಕೊಂಡು ಹೋದಾಗ, ಯುವಕನ ಕುಟುಂಬಕ್ಕೆ ಆಶ್ಚರ್ಯಚಕಿತರಾಗಿದ್ದಾರೆ. ಇವರಿಬ್ಬರು ಮದುವೆಯಾಗುವುದಾಗಿ ಕುಟುಂಬದವರಿಗೆ ತಿಳಿಸಿದ್ದಾರೆ, ಆದರೆ, ಕುಟುಂಬದವರು ನಿರಾಕರಿಸಿದ್ದಾರೆ. ತನ್ನ ತಂದೆ ಬಿಲಾಸ್‌‌‌ಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅಣ್ಣ ಇಂಜಿನಿಯರ್‌ ಆಗಿದ್ದಾನೆ ಹಾಗು ಇಬ್ಬರು ಸಹೋದರಿಯರ ಮದುವೆಯಾಗಿದೆ ಎಂದು ಯುವತಿ ನಿರ್ಭಯಾ ತಂಡಕ್ಕೆ ತಿಳಿಸಿದ್ದಾಳೆ. ಯುವಕನ ಕುಟುಂಬದವರು ತರಕಾರಿ ಮಾರಿ ಜೀವನ ಸಾಗಿಸುತ್ತಾರೆ. ಯುವಕ ತಾಯಿ ಕೇಳಿದಾಗ, ಯುವತಿ ಯುವಕನೊಂದಿಗೆ ತರಕಾರಿ ಮಾರಲು ಸಿದ್ದಳಾಗಿದ್ದಾಳೆ. ಸಧ್ಯಕ್ಕೆ ನಿರ್ಭಯಾ ತಂಡ ಯುವತಿಯನ್ನು ಯುವಕನ ತಾಯಿ ಮತ್ತು ಅತ್ತಿಗೆ ಹತ್ತಿರ ಇರುವಂತೆ ತಿಳಿಸಿದೆ. 
 
ಯುವತಿಯ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಬಿಲಾಸ್‌‌‌ಪುರದ ಪೋಲಿಸರಿಗೆ ಸೂಚನೆ ನೀಡಲಾಗಿದೆ ಎಂದು ನಿರ್ಭಯಾ ತಂಡದ ಅಧಿಕಾರಿ ಛಬ್ಬು ಪಾಟಿಲ್‌ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ