ಬಾಯ್‌ಫ್ರೆಂಡ್ ಎಂದು ಚಾಟಿಂಗ್ ಮಾಡುತ್ತಿದ್ದ ಮಹಿಳೆಗೆ ನಂತ್ರ ಆತ ತನ್ನ ಪತಿಯೆಂದು ಗೊತ್ತಾದಾಗ...!

ಬುಧವಾರ, 3 ಫೆಬ್ರವರಿ 2016 (15:33 IST)
ಪ್ರತಿನಿತ್ಯ ಆರೋಪ ಪ್ರತ್ಯಾರೋಪಗಳಿಂದ ಬೇಸತ್ತ ಬೇರೆ ಬೇರೆಯಾಗಿದ್ದ ದಂಪತಿಗಳಿಗೆ ಮುಂದೊಂದು ದಿನ ಕನಸಿನಲ್ಲಿಯೂ ಇಂತಹ ಘಟನೆ ನಡೆಯುತ್ತದೆ. ಮತ್ತೆ ನಾವು ಪರಸ್ಪರ ಭೇಟಿಯಾಗುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ.   
 
ಬೇರೆ ಬೇರೆಯಾಗಿ ವಾಸಿಸುತ್ತಿದ್ದ ದಂಪತಿಗಳು ನಿಜವಾದ ಪ್ರೀತಿಯನ್ನು ಪಡೆಯಲು ತಮ್ಮ ಹೆಸರು ಮತ್ತು ಗುರುತು ಬದಲಾಯಿಸಿಕೊಂಡು ಹೊಸ ಜೀವನ ಆರಂಭಿಸಲು ನಿರ್ಧರಿಸುತ್ತಾರೆ. 
 
ತಮ್ಮ ತಮ್ಮ ಜೀವನದಲ್ಲಿ ಹೊಸ ಸಂಗಾತಿಯನ್ನು ಹುಡುಕಲು ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌‌ಬುಕ್ ಮೊರೆಹೋಗುತ್ತಾರೆ. ಇಬ್ಬರಿಗೂ ಫೇಸ್‌ಬುಕ್‌ನಲ್ಲಿ ಹೊಸ ಸಂಗಾತಿಗಳು ದೊರೆಯುತ್ತಾರೆ. ಚಾಟ್ ಆರಂಭವಾಗುತ್ತದೆ. ಸುಮಾರು ಮೂರು ತಿಂಗಳ ಚಾಟಿಂಗ್ ನಂತರ ರೆಸ್ಟು‌ರಾಂಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಲು ನಿರ್ಧರಿಸುತ್ತಾರೆ. ರೆಸ್ಟುರಾಂಟ್‌ಗೆ ಬಂದ ದಂಪತಿಗಳಿಗೆ ಆಘಾತ ಕಾದಿರುತ್ತದೆ.
 
ತಾವು ಇಲ್ಲಿಯವರೆಗೆ ಚಾಟ್ ಮಾಡಿ ಡೇಟಿಂಗ್ ನಡೆಸಿದ್ದವರು ಬೇರೆ ಯಾರು ಅಲ್ಲ ಮೊದಲು ದಾಂಪತ್ಯ ಜೀವನ ನಡೆಸಿದ್ದವರೊಂದಿಗೆ ಎನ್ನುವ ಸಂಗತಿ ಬಹಿರಂಗವಾಗುತ್ತದೆ. ಫೇಸ್‌ಬುಕ್ ರೊಮ್ಯಾನ್ಸ್ ಅಂತ್ಯಗೊಳ್ಳುತ್ತದೆ. 
 
ರೆಸ್ಟುರಾಂಟ್‌ನಲ್ಲಿ ದಂಪತಿಗಳ ಕಲಹ ತಾರಕ್ಕೇರಿ ಕೈಕೈ ಮಿಲಾಯಿಸುವ ಹಂತಕ್ಕೆ ಬಂದು ತಲುಪುತ್ತದೆ. ಹೋಟೆಲ್ ಮ್ಯಾನೇಜರ್ ಕೂಡಾ ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ದಂಪತಿಗಳನ್ನು ಮತ್ತೊಂದು ಸುತ್ತಿನ ಕೌನ್ಸಿಲ್‌ಗೆ ಕಳುಹಿಸುತ್ತಾರೆ. 
 
ಹಿರಿಯ ಪೊಲೀಸ್ ಅಧಿಕಾರಿ ಮುಕುಲ್ ದ್ವಿವೇದಿ ಮಾತನಾಡಿ, ಇದೊಂದು ಸಂಪೂರ್ಣವಾಗಿ ವೈಯಕ್ತಿಕ ವಿವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
 
ಆಸಕ್ತಿಕರ ವಿಷಯವೆಂದರೆ, ಇಂತಹ ಘಟನೆ ವಾಸ್ತವ ದುನಿಯಾದಲ್ಲಿ ತುಂಬಾ ಅಪರೂಪವಾಗಿ ನಡೆಯುತ್ತದೆ. ನಿಮ್ಮ ಅದೃಷ್ಟ ಕೆಟ್ಟದಾಗಿದ್ದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗುತ್ತದೆ ಎಂದು ಪೊಲೀಸರು ನಗೆಯಾಡಿದ್ದಾರೆ.

ವೆಬ್ದುನಿಯಾವನ್ನು ಓದಿ