ದಿ. ರಾಜೀವ್ ಗಾಂಧಿ ಹೆಸರಿನ ಜಾತ್ರೆ, ಮಂದಿರದಲ್ಲಿ ಪೂಜೆ

ಬುಧವಾರ, 4 ಮಾರ್ಚ್ 2015 (12:59 IST)
ಎಡಬಿಡದೇ ಸುರಿಯುತ್ತಿದ್ದ ಮಳೆ ಮತ್ತು ಕೆಟ್ಟ ಹವಾಮಾನ ಲೆಕ್ಕಿಸದೇ ನೂರಾರು ಬುಡಕಟ್ಟು ಜನರು ಗುಜರಾತ್ ರಾಜಸ್ಥಾನ ಗಡಿಯ ಮಹಿಸಾಗರ ಜಿಲ್ಲೆಯ ಕುಗ್ರಾಮ ಸಾರಸ್ವದಲ್ಲಿ ಜಾತ್ರೆಗೆ ಜಮಾಯಿಸಿದ್ದರು. ಈ ಜಾತ್ರೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನಡೆಸಲಾಗುತ್ತದೆ.ರಾಜಕೀಯ ಮುಖಂಡರು ಮತ್ತು ಸೆಲಿಬ್ರಿಟಿಗಳಿಗೆ ಮಂದಿರಗಳು ಅಪರೂಪವೇನಲ್ಲ.

ಪ್ರಧಾನಿ ಮೋದಿ ಹೆಸರಲ್ಲಿ ರಾಜಕೋಟ್‌ನಲ್ಲಿ ನಿರ್ಮಿಸಿದ್ದ ಮಂದಿರಕ್ಕೆ ಮೋದಿ ಅಸಮ್ಮತಿ ಸೂಚಿಸಿದ್ದರಿಂದ ಅದನ್ನು ತೆಗೆಯಲಾಗಿದೆ. ಆದರೆ ಸಾರಸ್ವ ಗ್ರಾಮದಲ್ಲಿ ಮೂರ್ತಿಯೊಂದರ ಜೊತೆಗೆ ರಾಜೀವ್ ಗಾಂಧಿಯನ್ನೂ ಪೂಜಿಸಲಾಗುತ್ತಿದೆ. ಈ ಬುಡಕಟ್ಟು ಜನರು ರಾಜೀವ್ ಗಾಂಧಿಗೆ ತಾವು ಋಣಿಯಾಗಿರುವುದಾಗಿ ಹೇಳಿದ್ದಾರೆ.

ತಮ್ಮ ಗ್ರಾಮಕ್ಕೆ ರಾಜೀವ್ ಗಾಂಧಿ ಭೇಟಿ ನೀಡಿದ ಬಳಿಕ ಅಭಿವೃದ್ಧಿಯಾಯಿತೆಂದು ಸಾರಸ್ವಾ ಗ್ರಾಮದ ಜನರು ದಿವಂಗತ ಪ್ರಧಾನಿಗೆ ಕ್ರೆಡಿಟ್ ನೀಡಿದ್ದಾರೆ.  1986ರ ಮಾರ್ಚ್ 22ರಂದು ಆ ಗ್ರಾಮವು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾಗ ರಾಜೀವ್ ಗಾಂಧಿ ಭೇಟಿ ನೀಡಿದ ಬಳಿಕ ಗ್ರಾಮದಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು.

ವೆಬ್ದುನಿಯಾವನ್ನು ಓದಿ