ವರದಕ್ಷಿಣೆ ಹಿಂಸೆ ಆರೋಪ ಸುಳ್ಳೆಂದು ಸಾಬೀತಾದರೆ ಪತ್ನಿಗೆ ವಿಚ್ಛೇದನ ನೀಡಬಹುದು: ಸುಪ್ರೀಕೋರ್ಟ್

ಮಂಗಳವಾರ, 25 ನವೆಂಬರ್ 2014 (16:09 IST)
ಮಹಿಳೆಯೊಬ್ಬರು ತನ್ನ ಗಂಡ ಮತ್ತು ಆತನ ಬಂಧುಗಳ ಮೇಲೆ ವಿನಾಕಾರಣ ವರದಕ್ಷಿಣೆ ಆರೋಪ ಹೊರಿಸಿದರೆ, ಆಕೆಗೆ ವಿಚ್ಛೇದನ ನೀಡುವ ಅಧಿಕಾರ ಅವಳ ಗಂಡನಿಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕೆ.ಶ್ರೀನಿವಾಸ್ ಮತ್ತು ಸುನೀತಾ ಎಂಬ ದಂಪತಿಗಳ ಮದುವೆಯನ್ನು ಅನೂರ್ಜಿತಗೊಳಿಸಿದ ಕೋರ್ಟ್ ಪ್ರತಿವಾದಿಯ ಪತ್ನಿ ಸುಳ್ಳು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದರು. ವೈವಾಹಿಕ ಕ್ರೌರ್ಯವನ್ನು ಸಾಬೀತು ಪಡಿಸಲು ಇಂತಹ ಒಂದು ಸುಳ್ಳು ದೂರು ಸಾಕಾಗುತ್ತದೆ. ಅದರಂತೆ ನಾವು ಇವರಿಬ್ಬರ ಮದುವೆಯನ್ನು ರದ್ದುಗೊಳಿಸುತ್ತೇವೆ ಎಂದು ತೀರ್ಪು ನೀಡಿದೆ. 
 
 ಜೂನ್ 30, 1995ರಲ್ಲಿ  ಪತ್ನಿ ಸುನೀತಾ ತನ್ನ ಮನೆಯನ್ನು ತ್ಯಜಿಸಿದ ನಂತರ  ಗಂಡ ಶ್ರೀನಿವಾಸ್ ಜುಲೈ 14, 1995ರಲ್ಲಿ ವೈವಾಹಿಕ ಕ್ರೌರ್ಯ ಮತ್ತು ವೈವಾಹಿಕ ಸಂಬಂಧ ಕಡಿತಗೊಂಡಿರುವ ಬಗ್ಗೆ  ಪ್ರಕರಣ ದಾಖಲಿಸಿದ್ದರು. ಅದಕ್ಕೆ ಪ್ರತಿಯಾಗಿ ಪತ್ನಿ ಸುನೀತಾ ತನ್ನ ಗಂಡ ಮತ್ತು ಆತನ ಮನೆ 7 ಜನ ಸದಸ್ಯರ ಮೇಲೆ ಭಾರತೀಯ ದಂಡಸಂಹಿತೆಯ ಅನೇಕ ವಿಭಾಗಗಳಡಿ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯಡಿಯಲ್ಲಿ ಪ್ರತಿದೂರು ಸಲ್ಲಿಸಿದ್ದರು. ತತ್ಪರಿಣಾಮವಾಗಿ ಆಕೆಯ ಗಂಡ ಮತ್ತು ಆತನ ಕಡೆಯವರಿಗೆ ಜೈಲು ಶಿಕ್ಷೆಯಾಗಿತ್ತು. 
 
ಜೂನ್ 30, 2000 ನೇ ವರ್ಷದಲ್ಲಿ  ಶ್ರೀನಿವಾಸ್  ಮತ್ತು ಅವರ ಸಂಬಂಧಿಗಳು ನಿರಪರಾಧಿಗಳು ಎಂದು ಸಾಬೀತಾಗಿ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು. ಬೇರೊಂದು ಕುಟುಂಬ ನ್ಯಾಯಾಲಯ  ಡಿಸೆಂಬರ್ 30, 1999ರಲ್ಲಿ ಶ್ರೀನಿವಾಸ್ ಅವರಿಗೆ ವಿಚ್ಛೇದನವನ್ನು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು. 

ವೆಬ್ದುನಿಯಾವನ್ನು ಓದಿ