ಇಂದು ಸುದೀಪ್ ದಂಪತಿ ವಿಚ್ಛೇದನ ಅರ್ಜಿ ವಿಚಾರಣೆ

ಶುಕ್ರವಾರ, 22 ಏಪ್ರಿಲ್ 2016 (09:29 IST)
ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಿಚಾರಣೆ ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪರಷ್ಪರ ಸಮ್ಮತಿಯ ಮೇರೆಗೆ ದಂಪತಿಗಳು ಬೇರ್ಪಡಲು ನಿರ್ಧರಿಸಿದ್ದಾರೆ. 

ಸುದೀಪ್, ಪತ್ನಿ ಪ್ರಿಯಾ ಇಂದು ಕೋರ್ಟ್‌ಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ನೀಡುವ ಸಾಧ್ಯತೆ ಇದೆ. 
 
ಕಳೆದ ಮಾರ್ಚ್ ತಿಂಗಳಿನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ ಅಂದು ಅವರಿಬ್ಬರು ವಿಚಾರಣೆಗೆ ಹಾಜರಾಗಿಲ್ಲದಿದ್ದರಿಂದ ಬೆಂಗಳೂರಿನ ಒಂದನೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.  ಇಂದು ದಂಪತಿಗಳ ವಿಚಾರಣೆ ನಡೆಯಲಿದ್ದು ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜೀ ಸಂಧಾನ ಪ್ರಯತ್ನ ಕೂಡ ನಡೆಯುವ ಸಾಧ್ಯತೆ ಇದೆ.
 
ಕಳೆದ 2001ರಲ್ಲಿ ಪರಸ್ಪರ ಪ್ರೇಮಿಸಿ ವಿವಾಹವಾಗಿದ್ದ ನಟ ಸುದೀಪ್ ಮತ್ತು ಪ್ರಿಯಾ 14 ವರ್ಷಗಳ ಸಂಸಾರದ ನಂತರ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದಾರೆ.
 
ಕೇರಳದ ಮಲೆಯಾಳಿ ನಾಯರ್ ಕುಟುಂಬದ ಪ್ರಿಯಾ ರಾಧಾಕೃಷ್ಣನ್ ಮತ್ತು ಸುದೀಪ್ 14 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದರು. ಕೆಲ ತಿಂಗಳುಗಳಿಂದ ಕೆಲ ವಿಷಯದಲ್ಲಿ ಪರಸ್ಪರ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ. 
 
2013ರಲ್ಲಿ ಪತ್ನಿಗಾಗಿ 360 ಸ್ಟೇಜ್ ಎನ್ನುವ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ಸ್ಥಾಪಿಸಿದ್ದ ಸುದೀಪ್, ಪತ್ನಿಯನ್ನೇ ಮುಖ್ಯಸ್ಥರನ್ನಾಗಿಸಿದ್ದರು. ಪ್ರಿಯಾ 19 ಕೋಟಿ ಜೀವನಾಂಶ ಕೇಳಿದ್ದಾರೆ. ಪುತ್ರಿ ಚಿಕ್ಕವಳಾಗಿದ್ದರಿಂದ ಪತ್ನಿಯ ಕಸ್ಟಡಿಗೆ ನೀಡಲು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ