ಎರಡು ವರ್ಷಗಳಿಂದ ನಿರಂತರ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಖಾಸಗಿ ಶಾಲೆಯ ಶಿಕ್ಷಕಿ

ಶುಕ್ರವಾರ, 12 ಫೆಬ್ರವರಿ 2016 (14:44 IST)
ದೆಹಲಿ ಮೂಲದ ಉದ್ಯಮಿ, ಆತನ ಇಬ್ಬರು ಸಹೋದರರು ಮತ್ತು ಅವರ ಗೆಳೆಯನೊಬ್ಬ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದಾರೆ ಎಂದು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 
ಅತ್ಯಾಚಾರದಿಂದ ಆಘಾತಗೊಂಡ ಮಹಿಳೆ ಪ್ರಜ್ಞೆ ಕಳೆದುಕೊಂಡು ಬಿಕೆ.ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಆಸ್ಪತ್ರೆಯ ಹಿರಿಯ ವೈದ್ಯರ ಪ್ರಕಾರ, ಮಹಿಳೆಯ ಗುಪ್ತಾಂಗದಲ್ಲಿ ಆಳವಾದ ಗಾಯಗಳಿವೆ. ಆಕೆಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಕೆಲ ದಿನಗಳ ನಂತರವಷ್ಟೆ ಆಕೆ ಪೊಲೀಸರಿಗೆ ಹೇಳಿಕೆ ನೀಡಲು ಸಾಧ್ಯವಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
 
ಹಳೆಯ ಫರಿದಾಬಾದ್‌ನ ಛತ್ರವಾಲಾ ಪ್ರದೇಶದ ನಿವಾಸಿಯಾದ ಮಹಿಳೆ, ತನ್ನ ಪೋಷಕರಿಗೆ ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 
 
ದೆಹಲಿಯ ಗೋವಿಂದ್‌ಪುರಿ ನಿವಾಸಿಯಾದ ಸ್ವಿಟ್ ಅಂಗಡಿ ಮಾಲೀಕ ಸುಖದೇವ್ ನಗರ್ ಮತ್ತು ಆತನ ಇಬ್ಬರು ಸಹೋದರರು ಮತ್ತು ಅವರ ಗೆಳೆಯ ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಕಳೆದ ಎರಡು ವರ್ಷಗಳಿಂದ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಮಹಿಳೆ ಪೋಷಕರಿಗೆ ಮಾಹಿತಿ ನೀಡಿದ್ದಾಗಿ ಪೊಲೀಸ್ ಅಧಿಕಾರಿ ಕನ್ವರ್ ಸಿಂಗ್ ತಿಳಿಸಿದ್ದಾರೆ.
 
ಪೊಲೀಸರು ಮಹಿಳೆಯ ಹೇಳಿಕೆ ಪಡೆಯಲು ನಿರೀಕ್ಷಿಸುತ್ತಿದ್ದಾರೆ, ಈಗಾಗಲೇ ಆರೋಪಿಗಳ ವಿರುದ್ಧ ಶೂನ್ಯ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ಘಟನೆ ನಡೆದ ಸ್ಥಳವಾದ ಸರಿತಾ ವಿಹಾರ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ