ವಾಷಿಂಗ್ಟನ್ ನಿವಾಸಿ ಬಿಲ್ ನೊವಾಕ್ (78) ಕಳೆದ 50 ವರ್ಷಗಳ ಹಿಂದೆ ನಾರ್ಮನ್ ಮ್ಯಾಕ್ಆರ್ಥರ್ (76)ಅವರನ್ನು ದತ್ತು ಸ್ವೀಕರಿಸಿದ್ದು ಕಳೆದ 50 ವರ್ಷಗಳಿಂದ ತಂದೆ ಮಗ ಒಟ್ಟಿಗೆ ಜೀವಿಸುತ್ತಿದ್ದಾರೆ. ಪೆನ್ಸಿಲ್ವೇನಿಯಾ ಕೋರ್ಟ್ ಸಲಿಂಗಿಗಳ ವಿವಾಹಕ್ಕೆ ಅನುಮತಿ ನೀಡದಿದ್ದ ಕಾರಣಕ್ಕೆ ಸಲಿಂಗಿಗಳಾಗಿದ್ದ ಅವರಿಬ್ಬರು ಒಟ್ಟಿಗೆ ಜೀವಿಸಲು ಈ ದತ್ತು ಸ್ವೀಕಾರ ಮಾರ್ಗವನ್ನು ಅನುಸರಿಸಿದ್ದರು.
ಧೀರ್ಘಕಾಲದಿಂದ ಒಟ್ಟಿಗೆ ವಾಸಿಸುತ್ತಿರುವ ನಮ್ಮ ಸಂಬಂಧವನ್ನು ಪತಿ ಪತ್ನಿ ಸಂಬಂಧ ಎಂದು ಪರಿಗಣಿಸ ಬೇಕೆಂದು ಅವರಿಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ದತ್ತು ಪುತ್ರನನ್ನು ಮದುವೆಯಾಗಲು ಅವಕಾಶ ಕೋರಿ ಅಪ್ಪ ನೊವಾಕ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಸ್ವೀಕರಿಸಿದ್ದ ಕೋರ್ಟ್ ದತ್ತು ಸ್ವೀಕಾರವನ್ನು ವಜಾ ಮಾಡಿ ಮದುವೆಯಾಗಲು ಸಮ್ಮತಿಯನ್ನು ನೀಡಿತ್ತು.