ಕಿವುಡಿ, ಮೂಕಿ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಗುರುವಾರ, 16 ಫೆಬ್ರವರಿ 2017 (12:49 IST)
ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರಗೈದಿದ್ದ ಪಾಪಿ ತಂದೆಗೆ ವಿಜಯವಾಡದ ಸ್ಥಳೀಯ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲುವಾಸ ಮತ್ತು 30 ಸಾವಿರ ರೂಪಾಯಿ ದಂಡ ವಿಧಿಸಿದೆ. 

ಜಿಲ್ಲೆಯ ಪಾಯಕಾಪುರಂನ ಹಳೆ ರಾಜೀವ ನಗರದ ವಡ್ಡೆರ ಕಾಲೋನಿ ನಿವಾಸಿ 38 ವರ್ಷದ ದೇರಂಗುಲಾ ಯೆಡುಕೊಂಡಲು ಕೂಲಿ ಕಾರ್ಮಿಕನಾಗಿದ್ದು 15 ವರ್ಷದ ದಿವ್ಯಾಂಗ ಪುತ್ರಿಯನ್ನು 6 ತಿಂಗಳು ದೈಹಿಕವಾಗಿ ಬಳಸಿಕೊಂಡಿದ್ದ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಪಾಪಿ ತಂದೆ ಕಿವಿ ಕೇಳದ, ಮಾತುಬಾರದ ಮಗು ಯಾರ ಬಳಿ ಸಹ ತನ್ನ ನೋವನ್ನು ಹೇಳದ ಸ್ಥಿತಿಯಲ್ಲಿತ್ತು. 
 
ಕೊನೆಗೂ ಈ ಕೃತ್ಯ ತಾಯಿಯ ಗಮನಕ್ಕೆ ಬಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಪೀಡಿತಳ ತಾಯಿ, ತಂಗಿ,ತಮ್ಮ ಮತ್ತು 15 ಜನರ ಸಾಕ್ಷ್ಯವನ್ನು ಪಡೆದ ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದೆ.
 

ವೆಬ್ದುನಿಯಾವನ್ನು ಓದಿ