740 ಗಂಟೆ ಸತತ ಕಾರ್ಯಾಚರಣೆ: ರಾಜಸ್ಥಾನ ಪರಮಾಣು ಘಟಕ ವಿಶ್ವದಾಖಲೆ

ಮಂಗಳವಾರ, 12 ಆಗಸ್ಟ್ 2014 (18:53 IST)
ರಾಜಸ್ಥಾನ ಪರಮಾಣು ವಿದ್ಯುತ್ ಕೇಂದ್ರದ ಐದನೇ ಘಟಕ 740 ಗಂಟೆಗಳ ಕಾಲ ಯಾವುದೇ ಶಟ್‌ಡೌನ್ ಇಲ್ಲದೇ ಸತತ ಕಾರ್ಯಾಚರಣೆಯಿಂದ ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ಅಮೆರಿಕದ ಮೂಲದ ಲಾಸಾಲ್ಲೆ ಪರಮಾಣು ವಿದ್ಯುತ್ ಘಟಕ ಮಾಡಿದ್ದ ಸತತ 739 ಗಂಟೆಗಳ ಕಾರ್ಯಾಚರಣೆಯನ್ನು ಅದು ಮುರಿದಿದೆ. 
 
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಮೆರಿಕ ಮತ್ತು ಕೆನಡಾ ಪರಮಾಣು ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ನಿರಾಕರಿಸಿದರೂ, ಭಾರತದ ಇಂಜಿನಿಯರ್‌ಗಳು ಎರಡನೇ ಸ್ಥಾವರ ಪೂರ್ಣಗೊಳಿಸಿದ್ದರು. ರಾಜಸ್ಥಾನ ಪರಮಾಣು ವಿದ್ಯುತ್ ಯೋಜನೆಯ ಅನ್ವಯ ಎರಡು ಪರಮಾಣು ಸ್ಥಾವರಗಳನ್ನು ಕೆನಡಾದ ನೆರವಿನಿಂದ ರಾವಟ್‌ಭಾಟಾದಲ್ಲಿ ನಿರ್ಮಿಸಲಾಗಿತ್ತು.

1973ರಲ್ಲಿ ಪೋಕ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಭಾರತ ನಡೆಸಿದಾಗ, ಕೆನಡಾ ಮತ್ತು ಭಾರತ ನಡುವೆ ಪರಮಾಣು ವ್ಯಾಪಾರ ಒಪ್ಪಂದ ಮೊಟಕಾಗಿ, ಕೆನಡಾದ ಎಲ್ಲಾ ಇಂಜಿನಿಯರ್‌ಗಳನ್ನು ಯೋಜನೆಯನ್ನು ಬಿಟ್ಟು ಮಧ್ಯದಲ್ಲೇ ತೆರಳಿದ್ದರು. ಆ ಸಂದರ್ಭದಲ್ಲಿ ಎರಡನೇ ಸ್ಥಾವರವನ್ನು ಭಾರತದ ಇಂಜಿನಿಯರುಗಳು ಕೆನಡಾದ ನೆರವಿಲ್ಲದೇ ಪೂರ್ಣಗೊಳಿಸಿದರು. ರಾಜಸ್ಥಾನದ ಐದನೇ ಘಟಕ 2012ರ ಆಗಸ್ಟ್ 2ರಂದು ವಾಣಿಜ್ಯ ಉತ್ಪಾದನೆ ಆರಂಭಿಸಿತು.

ನಾವು ಒಂದು ವರ್ಷದ ಕಾಲ ತಡೆರಹಿತವಾಗಿ ವಿದ್ಯುತ್ ಉತ್ಪಾದನೆ ಮಾಡಬಹುದೆಂದು ಭಾವಿಸಿದ್ದೆವು. ನಾವು ಆ ಗುರಿಯನ್ನು ಸಾಧಿಸಿದ ಬಳಿಕ ಕೈಗಾ ಅಣುವಿದ್ಯುತ್ ಕೇಂದ್ರದ 539 ದಿನಗಳ ಸತತ ಕಾರ್ಯಾಚರಣೆ ದಾಖಲೆ ಮುರಿಯಲು ನಿರ್ಧರಿಸಿದೆವು. ನಾವು ಆ ದಾಖಲೆ ಮುರಿದಿದ್ದಲ್ಲದೇ, ಎರಡು ವರ್ಷಗಳ ತಡೆರಹಿತ ಕಾರ್ಯಾಚರಣೆಯ ದಾಖಲೆ ನಿರ್ಮಿಸಿದ್ದು, ಅಮೆರಿಕಕ್ಕಿಂತ ಮುಂದಿದ್ದೇವೆ ಎಂದು ಕೇಂದ್ರ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ