ಕೊನೆಗೂ ಅಬ್ದುಲ್ ಕಲಾಂ ಅಭಿಮಾನಿಗಳ ಕನಸು ನನಸಾಯ್ತು!

ಗುರುವಾರ, 27 ಜುಲೈ 2017 (09:52 IST)
ರಾಮೇಶ್ವರಂ: ದೇಶ ಕಂಡ ಮಹೋನ್ನತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎರಡನೇ ಪುಣ್ಯ ತಿಥಿ ಇಂದು. ಅವರ ಹುಟ್ಟೂರು ರಾಮೇಶ್ವರದ ಸಮಾಧಿ ಸ್ಥಳದಲ್ಲಿ ಪ್ರಧಾನಿ ಮೋದಿ ಇಂದು ಸ್ಮಾರಕ ಲೋಕಾರ್ಪಣೆ ಮಾಡಲಿದ್ದಾರೆ.


ಕೆಲವು ದಿನಗಳ ಹಿಂದೆ ಕಲಾಂ ಅವರ ಸಮಾಧಿ ಸ್ಥಳಕ್ಕೆ ಸರಿಯಾದ ವ್ಯವಸ್ಥೆಯಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರ  ಅಭಿಮಾನಿಗಳು ಫೋಟೋ ಶೇರ್ ಮಾಡುತ್ತಿದ್ದರು. ಇದೀಗ ಕೊನೆಗೂ ಅಭಿಮಾನಿಗಳ ಆಸೆ ನೆರವೇರಿದೆ.

ಡಿಆರ್ ಡಿಒ ವಿಶೇಷವಾಗಿ ವಿನ್ಯಾಸ ಮಾಡಿದ ರಾಷ್ಟ್ರೀಯ ಧ್ವಜ ಮತ್ತು ಕಲಾಂ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಅನಾವರಣಗೊಳಿಸಲಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ‘ಕಲಾಂ ಸೈನ್ಸ್ ವಿಷನ್ 2020’ ಎನ್ನುವ ಬಸ್ ಒಂದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಇದು ದೇಶದಾದ್ಯಂತ ಸಂಚರಿಸಿ ಕಲಾಂ ಅವರ ಕನಸುಗಳನ್ನು, ಸಾಧನೆಗಳನ್ನು ಪ್ರಚುರಪಡಿಸಿ ನಂತರ ಅವರ ಜನುಮದಿನವಾದ ಅಕ್ಟೋಬರ್ 15 ರಂದು ರಾಷ್ಟ್ರಪತಿ ಭವನ ತಲುಪಲಿದೆ.

ಇದನ್ನೂ ಓದಿ..  ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ