ಕಾಣೆಯಾಗಿರುವ ಮಕ್ಕಳನ್ನು ಹುಡುಕಿ ಕೊಡಿ: ಪಿಐಎಲ್‌ಗೆ ಸ್ಪಂದಿಸಿದ ಸುಪ್ರೀಂಕೋರ್ಟ್

ಮಂಗಳವಾರ, 25 ನವೆಂಬರ್ 2014 (19:12 IST)
ಕಾಣೆಯಾಗಿರುವ ಮಕ್ಕಳಿಗೆ ಸಂಬಂಧಿಸಿದಂತೆ ವರದಿ ನೀಡಿ ಎಂದು ರಾಜ್ಯಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ  ನೀಡಿದೆ. ಮುಖ್ಯ ನ್ಯಾ. ಎಚ್.ಎಲ್. ದತ್ತು ಅವರ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

1236 ಮಕ್ಕಳು 2012-13ರ ಸಾಲಿನಲ್ಲಿ ಕಾಣೆಯಾಗಿವೆ ಎಂದು ವರದಿಯಾಗಿತ್ತು. 6 ವಾರಗಳಲ್ಲಿ ಈ ಸಂಬಂಧ ವರದಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.  ಬಚ್ಪನ್ ಬಚಾವೋ ಎಂಬ ಎನ್‌ಜಿಒ ಈ ಸಂಬಂಧ  ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದೆ.  

2012-13ರ ಸಾಲಿನಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಆ ಮಕ್ಕಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಂತಹ ಮಕ್ಕಳ ಸ್ಥಿತಿಗತಿ ಹೇಗಿದೆ, ಆ ಮಕ್ಕಳು ಬದುಕಿದ್ದಾರೋ ಇಲ್ಲವೋ ಎಂಬ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ಬಚ್ಪನ್ ಬಚಾವೋ ಎನ್‌ಜಿಒ ಸಂಸ್ಥೆಯ ಪಿಐಎಲ್ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ 6 ವಾರಗಳಲ್ಲಿ ಈ ಸಂಬಂಧ ವರದಿ ಸಲ್ಲಿಸಿ ಎಂದು ರಾಜ್ಯಸರ್ಕಾರಕ್ಕೆ ಸೂಚನೆ ನೀಡಿದೆ. 
 

ವೆಬ್ದುನಿಯಾವನ್ನು ಓದಿ