ಅಕ್ಬರುದ್ದಿನ್ ಓವೈಸಿ ವಿರುದ್ಧ ಎಫ್ಐಆರ್

ಬುಧವಾರ, 7 ಅಕ್ಟೋಬರ್ 2015 (16:33 IST)
ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಕ್ರೂರಿ, ದೆವ್ವ ಎಂದು ನಿಂದಿಸಿದ್ದ ಎಐಎಮ್ಐಎಮ್ ನಾಯಕ ಅಸಾವುದ್ದೀನ್ ಓವೈಸಿ ಬಿಹಾರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಸದ್ಯದಲ್ಲಿಯೇ ಅವರನ್ನು ಬಂಧಿಸುವ ಸಾಧ್ಯತೆ ಇದೆ. 

ತಮ್ಮ ಸಹೋದರ ಅಸಾವುದ್ದೀನ್ ಅಕ್ಬರ್ ಅವರಂತೆ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕವೇ ಗುರುತಿಸಿಕೊಳ್ಳುವ ಅಕ್ಬರುದ್ದಿನ್, 
ಭಾನುವಾರ ಬಿಹಾರದ ಕಿಶನ್‌ಗಂಜ್‌ನಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದ ಸಂದರ್ಭದಲ್ಲಿ, ಪ್ರಧಾನಿ 2002ರಲ್ಲಿ ನಡೆದ ಗುಜರಾತ್ ದಂಗೆಯನ್ನು ಉಲ್ಲೇಖಿಸಿ, ಮೋದಿಯವರನ್ನು ಝಾಲಿಮ್ (ಕ್ರೂರಿ) ಮತ್ತು ಶೈತಾನ್ (ದೆವ್ವ) ಎಂದು ಜರಿದಿದ್ದರು. 
 
"ಮೋದಿ ಕ್ರೂರಿ ಮತ್ತು ಭೂತ ಹಾಗೂ 2002ರ ಗುಜರಾತ್ ಗಲಭೆಗೆ ಅವರೇ ಬಾಧ್ಯಸ್ಥರು", ಎಂದು ಅವರು ಆರೋಪಿಸಿದ್ದರು. 
 
"ನನ್ನನ್ನು ಸೇರಿದಂತೆ ಹಲವರ ಪ್ರಕಾರ ಗುಜರಾತ್ ಗಲಭೆಗೆ ಕಾರಣ ಮೋದಿ ಹೊರತು ಇನ್ಯಾರೂ ಅಲ್ಲ. 2004ರಲ್ಲಿ ಕಾಂಗ್ರೆಸ್‌ ಈ ಸೈತಾನನ ಮೇಲೆ ಎಫ್‌ಐಆರ್ ದಾಖಲಿಸಿ, ಜೈಲಿಗೆ ಹಾರಿದ್ದರೆ ಅವರಿಂದು ಪ್ರಧಾನಿಯಾಗುತ್ತಿರಲಿಲ್ಲ. ಕಾಂಗ್ರೆಸ್‌ ದುರ್ಬಲತೆ ಬಳಸಿಕೊಂಡು ಅವರಿಂದು ಪ್ರಧಾನಿಯಾಗಿದ್ದಾರೆ", ಎಂದು ತೆಲಂಗಾಣದ ಶಾಸಕ ಮತ್ತು ಎಐಎಮ್ಐಎಮ್ ವರಿಷ್ಠ ಅಸಾವುದ್ದೀನ್ ಓವೈಸಿ ಸಹೋದರ ಅಕ್ಬರುದ್ದೀನ್ ಹೇಳಿದ್ದರು. 
 
ಎಐಎಮ್ಐಎಮ್ ಬಿಹಾರದಲ್ಲಿ ಮುಸ್ಲಿಂ ಪ್ರಾಬಲ್ಯ ಉಳ್ಳ ಜಿಲ್ಲೆಗಳಾದ ಕಿಶನ್‌ಗಂಜ್, ಪುರ್ನೆಯಾ,ಅರಾರಿಯಾ, ಕತಿಹಾರ್ ಜಿಲ್ಲೆಗಳಲ್ಲಿ 24 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದೆ. ರಾಜ್ಯದ 105 ಮಿಲಿಯನ್ ಜನಸಂಖ್ಯೆಯಲ್ಲಿ ಪ್ರತಿಶತ 16.5 ಮುಸ್ಲಿಮರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ