ಮೋದಿ ಬಿಸಿ: ಐವರು ರಾಜ್ಯಪಾಲರಿಗೆ ವಜಾ ಭೀತಿ

ಮಂಗಳವಾರ, 20 ಮೇ 2014 (13:42 IST)
ಲೋಕಸಭೆ ಚುನಾವಣೆಯ ಹೀನಾಯ ಸೋಲಿನಿಂದಾಗಿ ಕೇಂದ್ರ ಯೋಜನಾ ಆಯೋಗದ ಸದಸ್ಯರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರಿಂದ ನೂತನ ಪ್ರಧಾನಿ ಮೋದಿ ನೂತನ ಸಮಿತಿಯನ್ನು ರಚಿಸಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ನೇಮಕಗೊಳಿಸಿ ರಾಜ್ಯಪಾಲರನ್ನು ಯುಪಿಎ ಸರಕಾರ ವಜಾಗೊಳಿಸಿತ್ತು. ಇದೀಗ ಯುಪಿಎ ಸರಕಾರ ನೇಮಕಗೊಳಿಸಿದ ರಾಜ್ಯಪಾಲರನ್ನು ವಜಾಗೊಳಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. 
 
ಗುಜರಾತ್‌ನಲ್ಲಿ ವಿವಾದಾತ್ಮಕ ರಾಜ್ಯಪಾಲರಾಗಿದ್ದ ಕಮ್ಲಾ ಬೇನಿವಾಲ್, ಕರ್ನಾಟಕದ ಎಚ್‌.ಆರ್.ಭಾರಧ್ವಾಜ್, ಕೇರಳ ರಾಜ್ಯಪಾಲೆ ಶೀಲಾ ದೀಕ್ಷಿತ ಮತ್ತು ಉತ್ತರಪ್ರದೇಶದ ರಾಜ್ಯಪಾಲ ಬಿ.ಎಲ್.ಜೋಷಿ ಮತ್ತು ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್ ತಮ್ಮ ತಮ್ಮ ಸ್ಥಾನಗಳಿಂದ ವಜಾಗೊಳ್ಳುವ ಸಾಧ್ಯತೆಗಳಿವೆ    
 
ಆದರೆ, ಸಂವಿಧಾನದ ಪ್ರಕಾರ ಆಯಾ ರಾಜ್ಯಗಳ ರಾಜ್ಯಪಾಲರು ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಅವರನ್ನು ವಜಾಗೊಳಿಸುವಂತಿಲ್ಲ. ಕಾಂಗ್ರೆಸ್ ಮಾತ್ರ ರಾಜ್ಯಪಾಲರ ಅಧಿಕಾರ ಅವಧಿ ಮುಕ್ತಾಯವಾಗುವ ಮುನ್ನವೇ ಅವರನ್ನು ವಜಾಗಳಿಸಿರುವುದನ್ನು ಸ್ಮರಿಸಬಹುದಾಗಿದೆ. 
 
 

ವೆಬ್ದುನಿಯಾವನ್ನು ಓದಿ