ಭಾರತದಲ್ಲಿದ್ದು ಪಾಕಿಸ್ತಾನ ಕ್ರಿಕೆಟ್‌‌‌ಗೆ ಬೆಂಬಲಿಸಿದ್ದರಿಂದ ಘರ್ಷಣೆ

ಶನಿವಾರ, 30 ಆಗಸ್ಟ್ 2014 (15:11 IST)
ಮೊಹಾಲಿಯಯ ಸ್ವಾಮಿ ಪರಮಾನಂದ ಕಾಲೇಜ್‌ ಆಪ್‌ ಇಂಜಿನಿಯರಿಂಗ್‌‌ ಆಂಡ್‌ ಟೆಕ್ನಾಲೋಜಿಯಲ್ಲಿ ಕಾಶ್ಮೀರ್‌ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ನಡುವೆ ಪಾಕಿಸ್ತಾನದ ಕ್ರಿಕೆಟ್‌‌ ತಂಡಕ್ಕೆ ಸಮರ್ಥನೆ ನೀಡುವ ವಿಷಯದಲ್ಲಿ ಸಂಘರ್ಷವೇರ್ಪಟ್ಟ ಹಿನ್ನಲೆಯಲ್ಲಿ 12 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಕಾಲೇಜನ್ನು  ಸೆಪ್ಟೆಂಬರ್ 8 ರವರೆಗೆ ಕಾಲೇಜಿಗೆ ರಜೆ ಘೊಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಕಾಲೇಜ್‌‌ನ ಕಾಮನ್‌ ರೂಮ್‌‌ನಲ್ಲಿ 15 ವಿದ್ಯಾರ್ಥಿಗಳು ಪಾಕಿಸ್ತಾನ ಮತ್ತು ಶ್ರೀಲಂಕಾದ ನಡುವಿನ ಒನ್‌ಡೇ ಪಂದ್ಯ ವಿಕ್ಷಿಸುತ್ತಿದ್ದರು. ಈ ನಡುವೆ ಜಮ್ಮು ಕಾಶ್ಮೀರದ ಎಂಟು ಜನ ವಿದ್ಯಾರ್ಥಿಗಳು ಪಾಕಿಸ್ತಾನ ತಂಡಕ್ಕೆ ಸಮರ್ಥನೆ ನೀಡ ತೊಡಗಿದಾ ಇತರ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. 
 
ಇದರ ನಂತರ, ವಿದ್ಯಾರ್ಥಿಗಳ ನಡುವಿನ ವಾದ ವಿವಾದ ಕೈಕೈ ಮಿಲಾಸಿಸುವತ್ತ ತಲುಪಿತು. ವಿದ್ಯಾರ್ಥಿಗಳು ಒಬ್ಬರ ಮೇಲೊಬ್ಬರು ಕಲ್ಲು ಎಸೆಯುವುದಕ್ಕೆ ಪ್ರಾರಂಭಿಸಿದರು. 
 
ಈ ಘಟನೆಯಲ್ಲಿ ಗಾಯಗೊಂಡ 12 ವಿದ್ಯಾರ್ಥಿಗಳನ್ನು ಶೀಘ್ರದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಕಾಲೇಜಿನಲ್ಲಿ ಕಾಶ್ಮೀರದ 200 ವಿದ್ಯಾರ್ಥಿಗಳು ಓದುತ್ತಿದ್ದಾರೆ, ಇವರಲ್ಲಿ ಹೆಚ್ಚಿನವರು ಹಾಸ್ಟೆಲ್‌‌ನಲ್ಲಿರುತ್ತಾರೆ. 
 
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ಯುಪಿಯ ಸಿಎಂ ಅಖಿಲೇಶ್‌ ಯಾದವ್‌‌ ಜೊತೆಗೆ ಈ ಕುರಿತು ಮಾತನಾಡಿದಾಗ ಕಾಶ್ಮೀರದ ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಕೇಸು ಹಿಂಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ