ಕಪ್ಪು ಹಣ ವಿವಾದ: ಬಿಜೆಪಿ ಸಂಸದನಿಗೆ ಛೀಮಾರಿ ಹಾಕಿದ ಅರುಣ್ ಜೇಟ್ಲಿ

ಶನಿವಾರ, 26 ಜುಲೈ 2014 (15:52 IST)
ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತರುವುದು ನಮ್ಮ ಜೀವಮಾನದಲ್ಲಿಯೇ ಅಸಾಧ್ಯ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ನನ್ನ ಸಹದ್ಯೋಗಿ ದುಬೆ ನಮ್ಮ ಜೀವಮಾನದಲ್ಲಿಯೇ ಕಪ್ಪು ಹಣವನ್ನು ಮರಳಿ ತರುವುದು ಅಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ಅವರ ನೂರು ವರ್ಷ ಬಾಳಲಿ ಎಂದು ಹಾರೈಸುತ್ತೇನೆ. ಕಪ್ಪು ಹಣ ಮರಳಿ ತರುವ ಬಗ್ಗೆ ಅವರು ದೀರ್ಘಕಾಲದ ನಿರೀಕ್ಷೆ ಮಾಡಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.  
 
ಜಾರ್ಖಂಡ್‌ನ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದರಾದ ಬಿಜೆಪಿ ಸಂಸದರಾದ ದುಬೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ದೇಶದ ಕಪ್ಪು ಹಣವನ್ನು ಭಾರತ ವಾಪಸ್ ಪಡೆಯುವುದು ನಮ್ಮ ಜೀವಮಾನದಲ್ಲಿಯೇ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. 
 
ಹಣಕಾಸು ಮಸೂದೆ ಮಂಡಿಸುವ ಸಂದರ್ಭದಲ್ಲಿ ಮಾತನಾಡಿದ್ದ ದುಬೆ, ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೂಡಿರುವ ಭ್ರಷ್ಟರು ಟ್ರಸ್ಟ್‌ಗಳನ್ನು ರಚಿಸಿದ್ದಾರೆ. ಸ್ವಿಸ್ ನಾಗರಿಕರು ಟ್ರಸ್ಟ್‌ನ ಉದ್ಯೋಗಿಗಳಾಗಿರುವುದರಿಂದ ಕಪ್ಪು ಹಣವನ್ನು ಮರಳಿ ಪಡೆಯುವುದು ಅಸಾಧ್ಯ ಎಂದು ಹೇಳಿಕೆ ನೀಡಿ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
 
 

ವೆಬ್ದುನಿಯಾವನ್ನು ಓದಿ