5ನೇ ತರಗತಿಗೆ ಶಾಲೆ ಬಿಟ್ಟ 94 ವರ್ಷದ ಅಜ್ಜನ ಸಂಬಳ 21ಕೋಟಿ

ಮಂಗಳವಾರ, 17 ಜನವರಿ 2017 (14:46 IST)
ಇವರು 5 ನೇ ತರಗತಿ ಓದುತ್ತಿರುವಾಗಲೇ ಶಾಲೆ ಬಿಟ್ಟವರು. ವಯಸ್ಸೀಗ 95. ಆದರೆ ನಿರಕ್ಷರತೆ ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಆವರಿಸುತ್ತಿರುವ ಮುಪ್ಪು ಯಾವುದೇ ರೀತಿಯಲ್ಲೂ ಬಾಧಿಸಿಲ್ಲ. ಎಫ್ಎಂಸಿಜೆ ವಲಯದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಐಒ ಇವರು. ಹೆಸರು ಧರ್ಮಪಾಲ್ ಗುಲಾಟಿ.

ಟಿವಿಯಲ್ಲಿ ಬರುವ ಎಂಡಿಎಚ್‌ನ ಪ್ರಚಾರ ಕಾರ್ಯಕ್ರಮ ಮತ್ತು ಮಸಾಲಾ ಪ್ಯಾಕ್‌ ಮೇಲೆ ರುಮಾಲು ಸುತ್ತಿಕೊಂಡು ಕಾಣಿಸಿಕೊಳ್ಳುವ ಇವರು ಗೋದ್ರೇಜ್, ಹಿಂದೂಸ್ತಾನ್ ಯುನಿಲಿವರ್ಸ ಸಿಇಒಗಳು ಪಡೆಯುವುದಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಾರೆ.
 
ದಾದಾಜಿ ಅಥವಾ ಮಹಾಶಯ್‌ಜೀ ಎಂದು ಕರೆಸಿಕೊಳ್ಳುವ ಗುಲಾಟಿ  ಕಂಪನಿ ಹೆಸರು ಮಹಾಶಯ್‌ಜೀ ಹಟ್ಟಿ ಭಾನುವಾರ ಸೇರಿದಂತೆ ಪ್ರತಿನಿತ್ಯ ತಮ್ಮ ಫ್ಯಾಕ್ಟರಿಯಲ್ಲಿ ರೌಂಡ್ಸ್ ಹೊಡೆಯುತ್ತಾರೆ. ಕಂಪನಿಯಲ್ಲಿ ಬರೊಬ್ಬರಿ 80 ಪ್ರತಿಶತ ಪಾಲು ಹೊಂದಿರುವ ಇವರ ಸಂಬಂಳದ 90% ರಷ್ಟು ಸೇವಾಕಾರ್ಯಗಳಿಗೆ ಹೋಗುತ್ತದೆ. 
 
ಗುಲಾಟಿ ತಂದೆ ಚುನ್ನಿಲಾಲ್ 1919ರಲ್ಲಿ ಪಾಕ್‌ನ ಸಿಯಾಲ್‌ಕೋಟ್‌ನಲ್ಲಿ ಆರಂಭಿಸಿದ್ದ ಸಣ್ಣ ಅಂಗಡಿ ಈಗ 1,500 ಕೋಟಿ ವಹಿವಾಟು ನಡೆಸುವ ಕಂಪನಿಯಾಗಿ ಬೆಳೆದಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ