ಸರ್ಕಾರದ ಪರಿಹಾರಕ್ಕಾಗಿ ಸ್ವಂತಃ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ

ಮಂಗಳವಾರ, 29 ಜುಲೈ 2014 (16:58 IST)
ಸಹಾರನ್‌ಪುರ್ ನಗರದಲ್ಲಿ ಶನಿವಾರದಂದು ನಡೆದ ಗಲಭೆಯಲ್ಲಿ ದಂಗೆ ಕೋರರು ಕೆಲವು ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯಲ್ಲಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾದ ನಂತರ ಘಟನೆಯನ್ನು ವಿವರಿಸಿದ್ದಾರೆ.
 
ತನಿಖೆ ನಡೆಸದ ಹೊರತು ಯಾರಿಗೂ ಪರಿಹಾರ ಸಿಗುವುದಿಲ್ಲ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಲವರು ಸರ್ಕಾರದಿಂದ ಪರಿಹಾರ ಪಡೆಯಲು ತಮ್ಮ ತಮ್ಮ ಅಂಗಡಿಗಳಿಗೆ ಮತ್ತು ಹೋಟೆಲುಗಳಿಗೆ ಬೆಂಕಿ ಹಚ್ಚಿಕೊಂಡ ವಿಚಿತ್ರ ಘಟನೆಗಳು ವರದಿಯಾಗಿವೆ. 
 
ಕೋರ್ಟ್‌ ರಸ್ತೆಯಲ್ಲಿ  ಕೆಲವು ಜನರು ತಮ್ಮ ಅಂಗಡಿಯ ಎದುರಿಗಿದ್ದ ಟಾಯರ್‌‌ಗಳಿಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ.  ಬೆಂಕಿಯಿಂದ ಅಂಗಡಿಗಳು ಕೂಡ ಭಸ್ಮವಾಗಿವೆ.  
 
ಅಲ್ಲಿ ಒಂದು ಟೇಲರ್‌ ಅಂಗಡಿ ಕೂಡ ಭಸ್ಮವಾಗಿದೆ. ಇತರೆ ಸಮುದಾಯದವರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಫೈರ್‌ ಬ್ರಿಗೆಡ್‌ ಮಾತ್ರ ಶಾರ್ಟ್ ಸರ್ಕಿಟ್‌‌ನಿಂದ ಬೆಂಕಿ ಹತ್ತಿರುವ ಸಂಭವವಿದೆ ಎಂದು ತಿಳಿಸಿದ್ದಾರೆ.
 
ಶನಿವಾರ ಆಸ್ಪತ್ರೆಗೆ ಗಾಯಾಳು ಯುವಕರು ಹೋಗಿದ್ದಾರೆ. ಇವರ ಮಂಡಿ ಮತ್ತು ಕೈಗಳಿಗೆ ಗಾಯವಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಈ ಗಾಯ ಹೇಗೆ ಆಗಿದೆ ಎಂದು ಕೇಳಿದಾಗ, ಕೆಲ ಜನರು ಸುತ್ತುವರೆದು ಹೊಡೆದಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಆದರೆ ಇವರ ಗಾಯ ನೋಡಿದ ಆಸ್ಪತ್ರೆ ಸಿಬ್ಬಂದಿ ರಸ್ತೆ ಅಫಘಾತದಿಂದ ಇವರಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಯುವಕ ತಾವು ಬೈಕ್‌‌ನಿಂದ ಬಿದ್ದಿರುವುದಾಗಿ ತಿಳಿಸಿದ್ದಾನೆ. 
 
ಗಲಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು ಆದರೆ ಫೋಲಿಸರಿಗೆ ನೋಡಿ ಹೆದರಿ ಬೈಕ್‌‌ನಿಂದ ಬಿದ್ದಿದ್ದಾರೆ. ನಂತರ ನೀವು ಸುಳ್ಳು ಏಕೆ ಹೇಳಿದ್ದಿರಾ ಎಂದು ಕೇಳಿದರೆ, ಅವರು ನಗುತ್ತ ಗಲಭೆಯಲ್ಲಿ ಗಾಯವಾಗಿದೆ ಎಂದರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಸರ್ಕಾರ ದಂಗೆಯಲ್ಲಿ ಸತ್ತ ಜನರಿಗೆ 10 ಲಕ್ಷ ರೂಪಾಯಿ ಮತ್ತು ಗಾಯಾಳುಗಳುಗೆ 50 ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಿತ್ತು. 
 
ತನಿಖೆಯಾಗದ ಹೊರತು ಯಾರಿಗೂ ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ತನಿಖಾ ಸಮಿತಿ ರಚಿಸಲಾಗುವುದು ಮತ್ತು ದಂಗೆಯಲ್ಲಿ ಸಾವನ್ನಪ್ಪಿದವರ ಮತ್ತು ಗಾಯಾಳುಗಳ ತನಿಖೆ ನಡೆಸಲಾಗುವುದು ಎಂದು ಎಡಿಎಮ್‌‌(ವಿತ್ತ) ಸೈಯದ್‌‌ ನಿಜಾಮುದ್ದೀನ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ