ಅತ್ಯಾಚಾರ ಪ್ರಕರಣಗಳಿಗೆ ಮೊಬೈಲ್ ಫೋನ್ ಕಾರಣ:ಆಜಂ ಖಾನ್

ಶುಕ್ರವಾರ, 23 ಅಕ್ಟೋಬರ್ 2015 (17:06 IST)
ಅತ್ಯಾಚಾರ ಪ್ರಕರಣಗಳಿಗೆ ಮೊಬೈಲ್ ಫೋನ್ ಕಾರಣವಾಗಿದೆ ಎಂದು ಉತ್ತರಪ್ರದೇಶದ ನಗರಾಭಿವೃದ್ಧಿ ಖಾತೆ ಸಚಿವ ಆಜಂ ಖಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಹೆಚ್ಚು ಬಳಕೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದು ಅತ್ಯಾಚಾರ ಪ್ರಕರಣಗಳಿಗೆ ಮೊಬೈಲ್ ಫೋನ್ ಕಾರಣವಾಗಿದೆ, ಮೊಬೈಲ್ ಮತ್ತು ಇಂಟರ್‌ನೆಟ್‌ನಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ ಎಂದು ಹೇಳಿದ್ದಾರೆ.

ಸಚಿವ ಆಜಂ ಖಾನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ.
 
ಯುವಕರು ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ ಎಂದು ಆಜಂ ಖಾನ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ