ಗೋವಿನ ವಿಚಾರ ಬಿಡಿ, ನಾವು ಮೇಕೆಯನ್ನು ಸಹ ಬಲಿ ಕೊಡುವುದಿಲ್ಲ!

ಬುಧವಾರ, 7 ಅಕ್ಟೋಬರ್ 2015 (11:32 IST)
ದಾದ್ರಿ ಹತ್ಯೆ ಪ್ರಕರಣ ದೇಶಾದ್ಯಂತ ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಮಧ್ಯೆ ಕುತೂಹಲಕಾರಿ ಅಂಶವೊಂದು ಬಯಲಾಗಿದೆ.

ಹತ್ಯೆಯಾದ ಮೊಹಮ್ಮದ್ ಅಖಲಕ್ ಕುಟುಂಬ ಸದಸ್ಯರು ಹೇಳುವ ಪ್ರಕಾರ ಗೋಮಾಂಸ ತಿನ್ನುವುದಿರಲಿ, ಕಳೆದ 10 ವರ್ಷಗಳಿಂದ ಅವರು ಈದ್ ಮಿಲಾದ್ ಸಮಯದಲ್ಲಿ ಮೇಕೆಯನ್ನು ಸಹ ಬಲಿ ಕೊಡುವುದಿಲ್ಲವಂತೆ. 
 
'ನಾವು ಬಕ್ರಿದ್ ಹಬ್ಬದ ಸಮಯದಲ್ಲಿ ಕುರಿ ಕಡಿಯುವುದನ್ನು ಸಹ ನಿಲ್ಲಿಸಿದ್ದೇವೆ. ಆದರೆ ನಮ್ಮ ಗ್ರಾಮದ ಜನರು ನಮ್ಮ ತಂದೆ ಆಕಳನ್ನು ಕೊಂದು ತಿಂದಿದ್ದಾನೆ ಎಂದು ಆರೋಪಿ ಕೊಂದು ಹಾಕಿದ್ದಾರೆ', ಎಂದು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಸರ್ತಾಜ್ ಖೇದ ವ್ಯಕ್ತ ಪಡಿಸುತ್ತಾರೆ.
 
ಚೆನ್ನೈನಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ತಾಜ್ ಮನೆಯಲ್ಲಾದ ಅನಾಹುತದ ಬಳಿಕ ಅಲ್ಲಿಗೆ ಮರಳಿದ್ದಾರೆ.
 
"ನಮ್ಮ ಹಳ್ಳಿಯಲ್ಲಿ ಮುಸ್ಲಿಮರು ನಗಣ್ಯ ಸಂಖ್ಯೆಯಲ್ಲಿದ್ದಾರೆ ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ನಾವು  ಹಬ್ಬದ ಸಂದರ್ಭದಲ್ಲಿ ಕುರಿ ಬಲಿಕೊಡುವುದನ್ನು ಸಹ ನಿಲ್ಲಿಸಿದ್ದೇವೆ", ಎಂದು ಸರ್ತಾಜ್ ಹೇಳಿದ್ದಾರೆ.
 
ಮೃತನ ಅಳಿಯ ವಾಸೀಂ ಹೇಳುವ ಪ್ರಕಾರ ದುರ್ಘಟನೆ ನಡೆದ ದಿನ ಫ್ರಿಡ್ಜ್‌ನಲ್ಲಿ ಪತ್ತೆಯಾಗಿದ್ದು ಕುರಿ ಮಾಂಸ. ಸ್ವತಃ ತಾವೇ ಅದನ್ನು ಮೋದಿ ನಗರದಿಂದ ತಂದಿದ್ದಾಗಿ ವಾಸೀಂ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ