ಮದ್ಯ ಸಾಗಿಸುತ್ತಿದ್ದ ಆರೋಪ; ಮಾಜಿ ಮುಖ್ಯಮಂತ್ರಿ ಮಾಂಜಿ ಮೊಮ್ಮಗನ ಬಂಧನ
ಶನಿವಾರ, 15 ಅಕ್ಟೋಬರ್ 2016 (16:12 IST)
ತಮ್ಮ ಮಾಲೀಕತ್ವದ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ಬಿಹಾರ್ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಮೊಮ್ಮಗ ವಿಕ್ಕಿ ಮಾಂಜಿಯನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ.
ಜಾರ್ಖಂಡ್‌ನ ಛಾತ್ರಾದಿಂದ ಗಯಾದಲ್ಲಿರುವ ತನ್ನ ಮನೆಗೆ ಬರುತ್ತಿದ್ದ ವಿಕ್ಕಿಯನ್ನು ಮೊದಲೇ ದೊರೆತಿದ್ದ ಗುಪ್ತ ಸೂಚನೆಯ ಮೇರೆಗೆ ತಡೆದ ಪೊಲೀಸರು ಅವರ ಕಾರಿನಲ್ಲಿ ಆಲ್ಕೋಹಾಲ್ ಬಾಟಲಿಯನ್ನು ಪತ್ತೆ ಹಚ್ಚಿದ್ದಾರೆ.
ಧೋಬಿಯ ಕೋಥ್ವಾರ್‌ನಲ್ಲಿ ಅವರನ್ನು ಬಂಧಿಸಲಾಗಿದ್ದು ವಿಚಾರಣೆಗೊಳಪಡಿಸಲಾಗಿದೆ.
ಕಳೆದ ಜನೇವರಿ ತಿಂಗಳಲ್ಲಿ ವಿಕ್ಕಿ ತಮ್ಮ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ