ಮಾಜಿ ಮುಖ್ಯಮಂತ್ರಿ ಕಾಮತ್‌ಗೆ 9 ಮಿಲಿಯನ್ ಡಾಲರ್ ಲಂಚ ನೀಡಿದ ಲೂಯಿಸ್ ಬೆರ್ಗೆರ್ ಕಂಪೆನಿ

ಮಂಗಳವಾರ, 28 ಜುಲೈ 2015 (20:13 IST)
ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮತ್ತು ಮಾಜಿ ಸಚಿವ ಚುರ್ಚಿಲ್ ಅಲ್ಮಾವೋ ಅವರಿಗೆ 9 ಮಿಲಿಯನ್ ಡಾಲರ್‌ಗಳನ್ನು ಲಂಚವಾಗಿ ನೀಡಿದ್ದೇವೆ ಎಂದು ಅಮೆರಿಕ ಮೂಲದ ಲೂಯಿಸ್ ಬೆರ್ಗರ್ ಅಧಿಕಾರಿಗಳು ಹೇಳಿದ್ದಾರೆ.   
 
ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಅವರು, 976,000 ಡಾಲರ್ ಹಣವನ್ನು ಮಾಜಿ ಸಿಎಂ ಕಾಮತ್‌ಗೆ ನೀಡಲಾಗಿದೆ ಎಂದು ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಮಾಜಿ ಸಿಎಂ ಕಾಮತ್ ಮತ್ತು ಮಾಜಿ ಸಚಿವ ಅಲ್ಮಾವೋ ವಿರುದ್ಧ ಸಾಕ್ಷಗಳಲ್ಲಿ ಹೋಲಿಕೆಗಳಿವೆ. ಆದರೆ, ಮಾಜಿ ಸಚಿವ ಅಲ್ಮಾವೋ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಗೋವಾ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 
 
ಲೂಯಿಸ್ ಬರ್ಗರ್ ಸಂಸ್ಥೆ ಜಯ ಯೋಜನೆ ಪ್ರೊಜೆಕ್ಟ್ ಪಡೆದಾಗ ಕಾಮತ್ ಮುಖ್ಯಮಂತ್ರಿಯಾಗಿದ್ದರು. ಮಾಜಿ ಸಚಿವ ಅಲ್ಮಾವೋ ಅಂದು ಲೋಕೋಪಯೋಗಿ ಸಚಿವರಾಗಿದ್ದರು
 
ಕೇಂದ್ರ ಸರಕಾರ ಜಪಾನ್ ಸರಕಾರದ ಸಹಭಾಗಿತ್ವದೊಂದಿಗೆ ಐದು ವರ್ಷಗಳ ಗೋವಾ ಜಲ ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿತ್ತು.
 
ಜಲ ಸರಬರಾಜು ಗುತ್ತಿಗೆಯನ್ನು ಪಡೆಯಲು ಲೂಯಿಸ್ ಬೆರ್ಗರ್ ಸಂಸ್ಥೆ ಕನಿಷ್ಠ ಒಬ್ಬ ಸಚಿವ ಹಾಗೂ ಇಬ್ಬರು ಅಧಿಕಾರಿಗಳಿಗೆ ಲಂಚ ನೀಡಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿತ್ತು. ಇಲಾಖೆಯ ಆರೋಪವನ್ನು ಲೂಯಿಸ್ ಬೆರ್ಗೆರ್ ಕಂಪೆನಿ ಒಪ್ಪಿಕೊಂಡಿತ್ತು.
 

ವೆಬ್ದುನಿಯಾವನ್ನು ಓದಿ