ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಕಾರ್ ಮತ್ತು ಇಂಧನ ಬೇಕಂತೆ

ಗುರುವಾರ, 30 ಜುಲೈ 2015 (16:04 IST)
ಇಡೀ ರಾಷ್ಟ್ರ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಅಧ್ಯಕ್ಷರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ ಹಠಾತ್ ಮರಣದಿಂದಾಗಿ ಶೋಕದಲ್ಲಿ ಮುಳುಗಿದ್ದರೆ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಋಣಾತ್ಮಕ ಕಾರಣಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. 

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ ಪಾಟೀಲ್, ಕೇಂದ್ರ ಸರ್ಕಾರದಿಂದ ಒಂದು ಅಧಿಕೃತ ಕಾರನ್ನು ಅಪೇಕ್ಷಿಸಿದ್ದಾರೆ. ಅಲ್ಲದೇ ಅದಕ್ಕೆ ಇಂಧನ ತುಂಬುವ ಖರ್ಚನ್ನು ಸಹ ಸರ್ಕಾರವೇ ಭರಿಸಬೇಕಂತೆ. ಜತೆಗೆ ಅವರ ಖಾಸಗಿ ವಾಹನವನ್ನು ಬಳಸಲು ಸಹ ಅನುವು ಮಾಡಿಕೊಡಬೇಕಂತೆ. ಆದರೆ ಅವರ ಬೇಡಿಕೆಯನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಎರಡೆರಡು ರೀತಿ ಸೌಲಭ್ಯ ಒದಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರತಿಭಾ ಪಾಟೀಲ್‌ ಅವರಿಗೆ ತಿಳಿಸಿದೆ. 
 
ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಬಂದಿದ್ದ ಉಡುಗೊರೆಗಳನ್ನು ತಮ್ಮ ಮನೆಗೆ ಹೊತ್ತೊಯ್ದ ಅರೋಪ ಕೂಡ ಪ್ರತಿಭಾ ಪಾಟೀಲ್ ಮೇಲಿದೆ.
 
 
ನಿಯಮಗಳ ಪ್ರಕಾರ ಮಾಜಿ ರಾಷ್ಟ್ರಪತಿಯಾದವರಿಗೆ ಇಂಧನ ಭತ್ಯೆ ಇಲ್ಲವೇ ಸರ್ಕಾರಿ ಕಾರು ನೀಡಬಹುದು.
 
ಈ ಕುರಿತು ಕಳೆದ ಮೂರು ತಿಂಗಳಿಂದ ಪಾಟೀಲ್ ಕಚೇರಿಯ ಅಧಿಕಾರಿಗಳ ಜತೆ ಸಂವಹನ ನಡೆದ ಬಳಿಕ ನಿಮಗೆ ಕಾರ್ ಬೇಕೆ ಅಥವಾ, ಇಂಧನದ ವೆಚ್ಚವನ್ನು ಭರಿಸಬೇಕೆ? ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಎಂದು ಕೇಂದ್ರ  ಪ್ರತಿಭಾ ಪಾಟೀಲ್ ಅವರಿಗೆ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ