ರೇಪ್ ತಡೆಯಲು ಯತ್ನಿಸಿದ ಯುವತಿಯ ಕಿವಿ ಕಟ್ ಮಾಡಿದ ಕಾಮುಕರು

ಶುಕ್ರವಾರ, 6 ಜನವರಿ 2017 (12:17 IST)
ಆಘಾತಕಾರಿ ಘಟನೆಯೊಂದರಲ್ಲಿ ಯುವತಿಯೊಬ್ಬಳು ಅತ್ಯಾಚಾರ ತಡೆಯಲು ಯತ್ನಿಸಿದ್ದರಿಂದ ಕೋಪಗೊಂಡ ಕಾಮುಕರು ಆಕೆಯ ಕಿವಿಗಳನ್ನು ಕತ್ತರಿಸಿ ಹಾಕಿರುವ ಹೇಯ ಕೃತ್ಯ ಬಾಘಪತ್ ಜಿಲ್ಲೆಯಲ್ಲಿ ನಡೆದಿದೆ.
 
ಕಳೆದ ಜನೆವರಿ 4 ರಂದು ಯುವತಿಯ ಮನೆಗೆ ನುಗ್ಗಿದ ನಾಲ್ವರು ಕಾಮುಕರು ಗ್ಯಾಂಗ್‌ರೇಪ್ ಎಸಗಲು ಪ್ರಯತ್ನಿಸಿದಾಗ ಆಕೆ ತೀವ ಪ್ರತಿರೋಧ ವ್ಯಕ್ತಪಡಿಸಿ ಜೋರಾಗಿ ಕೂಗಿದ್ದರಿಂದ ಕೋಪಗೊಂಡ ಆರೋಪಿಗಳು ಇಂತಹ ಕೃತ್ಯವೆಸಗಿದ್ದಾರೆ.
 
ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ಕಿರುಕುಳ ಘಟನೆಗಳು ನಡೆದಿರುವುದು ಜನತೆಯಲ್ಲಿ ಆಕ್ರೋಶ ಮೂಡಿಸಿದೆ.
 
ಹೊಸ ವರ್ಷಾಚರಣೆಯ ದಿನದಂದು ಜನದಟ್ಟಣೆಯನ್ನು ನಿಭಾಯಿಸಲು ಸಾವಿರಾರು ಪೊಲೀಸರನ್ನು ನಿಯೋಜಿಸಿದ್ದರೂ ಯುವಕರು ಗುಂಪುಗಳು ಯುವತಿಯರ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಲ್ಲದೇ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಹೇಯ ಘಟನೆಗಳು ವರದಿಯಾಗಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ