ನಾಲ್ಕು ವರ್ಷದ ಬಾಲಕನಿಗೆ ಮದ್ಯ ಸೇವಿಸುವಂತೆ ಒತ್ತಡ ಹೇರಿದ ಆರೋಪಿಗಳ ಬಂಧನ

ಮಂಗಳವಾರ, 7 ಜುಲೈ 2015 (14:50 IST)
ಆಘಾತಕಾರಿ ಘಟನೆಯೊಂದರಲ್ಲಿ ನಾಲ್ಕು ವರ್ಷದ ಬಾಲಕನಿಗೆ ಮದ್ಯ ಸೇವಿಸುವಂತೆ ಒತ್ತಡ ಹೇರುತ್ತಿರುವ ವಿಡಿಯೋ ವೈರಲ್ ಆಗಿದ್ದರಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ನಾಲ್ತು ವರ್ಷದ ಬಾಲಕನಿಗೆ ಮದ್ಯ ಸೇವಿಸುವಂತೆ ಒತ್ತಡ ಹೇರುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿ ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸಪ್‌ ಮೂಲಕ ಬಹಿರಂಗವಾಗಿದೆ
 
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತಮಿಳುನಾಡು ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಮಕ್ಕಳ ಶೋಷಣೆ, ಹತ್ಯಾಯತ್ನ ಪ್ರಕರಣ ದಾಖಲಿಸಿದ್ದಾರೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬಾಸಿದ್ದಾರೆ. 
 
ಚೆನ್ನೈನಿಂದ 200 ಕಿ.ಮೀ ದೂರದಲ್ಲಿರುವ ತಿರುವಣ್ಣಾಮಲೈ ಜಿಲ್ಲೆಯ ಚೋಳನ್‌ಕುಪ್ಪಂ ಗ್ರಾಮದ ಸರೋವರದ ಬಳಿ ಈ ಘಟನೆ ನಡಿದಿದೆ.
 
ತಿರುವಣ್ಣಾಮಲೈ ಜಿಲ್ಲೆಯ ಸೋಳನ್‌ಕುಪ್ಪಂ ಗ್ರಾಮದ ನಿವಾಸಿಯಾದ ಬಾಲಕನನ್ನು ಆತನ ಮಾವ ಮುರುಗನ್ ಮತ್ತು ಆತನ ಗೆಳೆಯ ಮಣಿಕಂದನ್ ಕರೆದುಕೊಂಡು ಸರೋವರದ ಬಳಿ ಬಂದಿದ್ದಾನೆ. ನಂತರ ಇನ್ನಿತರ ಮೂವರು ಗುಂಪಿಗೆ ಸೇರ್ಪಡೆಯಾಗಿದ್ದಾರೆ.
 
ಬಾಟಲ್‌ನಲ್ಲಿದ್ದ ಮದ್ಯವನ್ನು ಕಪ್‌ಗೆ ಸುರಿದು ಕುಡಿಯುವಂತೆ ಒತ್ತಾಯಿಸಿದ್ದಲ್ಲದೇ ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿದ್ದ ಕಡಲೆಕಾಯಿಯನ್ನು ತಿನ್ನುವಂತೆ ಒತ್ತಡ ಹೇರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 
 
ಆರೋಪಿಗಳು ಕ್ಯಾಮರಾ ಮುಂದೆ ಜೋರಾಗಿ ಕೇಕೆ ಹಾಕುತ್ತಾ ನಾಲ್ಕತು ವರ್ಷದ ಮಗುವಿಗೆ ಮದ್ಯ ಸೇವನೆಗೆ ಒತ್ತಾಯಿಸುತ್ತಿದ್ದ ಒಂದುವರೆ ನಿಮಿಷದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.  
 
ಬಾಲಕ ಪ್ಲ್ಯಾಸ್ಟಿಕ್ ಬ್ಯಾಗ್‌ ದೂರ ಎಸೆದು ಕಪ್‌ನಲ್ಲಿದ್ದ ಮದ್ಯ ಸೇವಿಸುತ್ತಿರುವುದು ಬಹಿರಂಗವಾಗಿದೆ ಎಂದು ಹಿರಿಯ ಪೊಲೀಸ್ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ