400 ರೂಪಾಯಿ ದರೋಡೆ: ನಾಲ್ಕು ವರ್ಷ ಶಿಕ್ಷೆ

ಮಂಗಳವಾರ, 6 ಅಕ್ಟೋಬರ್ 2015 (16:41 IST)
ಚಾಲಕನೊಬ್ಬನಿಂದ 400 ರೂಪಾಯಿಗಳನ್ನು ಕದ್ದಿದ್ದ ದರೋಡೆಕೋರರಿಬ್ಬರಿಗೆ ಬರೊಬ್ಬರಿ 14 ವರ್ಷಗಳ ನಂತರ ತಲಾ ವರ್ಷಗಳ ಶಿಕ್ಷೆಯಾಗಿದೆ. ಜತೆಗೆ ಪೀಡಿತನಿಗೆ ತಲಾ 10 ಸಾವಿರ ರೂಪಾಯಿ ನೀಡುವಂತೆ ಕೋರ್ಟ್ ಆದೇಶಿಸಿದೆ. 

ಕಳೆದ 14 ವರ್ಷಗಳ ಹಿಂದೆ ಸುಮಿತ್(33) ಮತ್ತು ಹೇಮ ರಾಜ್(37) ಎಂಬುವವರು ವಿಜಯ್ ಎಂಬ ಆಟೋ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ 400 ರೂಪಾಯಿಗಳನ್ನು ದೋಚಿದ್ದರು.ಸೆಪ್ಟೆಂಬರ್ 11, 2001ರಲ್ಲಿ ಈ ಘಟನೆ ನಡೆದಿತ್ತು. 
 
ದೆಹಲಿ ನಿವಾಸಿಗಳಾದ ಮೂವರು ಅಪರಾಧಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದ. ಆತನೇ ಆರೋಪಿಗಳನ್ನು ಸೆರೆ ಹಿಡಿಯಲು ಸಹಕರಿಸಿದ್ದ. 
 
ಸೆಪ್ಟೆಂಬರ್ 11 ಮತ್ತು 12ರ ನಡುವಿನ ರಾತ್ರಿ ಮೂವರು ಆರೋಪಿಗಳು ವಿಜಯ್ ಆಟೋರಿಕ್ಷಾ ಬಾಡಿಗೆ ಹಿಡಿದು ಐಟಿಓದಿಂದ ಬುರಾರಿಗೆ ಪಯಣಿಸಿದ್ದರು. ದಾರಿ ಮಧ್ಯದಲ್ಲಿ ಮೂವರು ಸೇರಿ ಆಟೋ ಚಾಲಕನನ್ನು ಬೆದರಿಸಿ ಆತನ ಬಳಿ ಇದ್ದ 400 ರೂಪಾಯಿಗಳನ್ನು ಮತ್ತು ವಾಹನ ಚಾಲನಾ ಪರವಾನಿಗೆ ಪತ್ರವನ್ನು ಸಹ ದೋಚಿದ್ದರು. ಆತ ಸಹಾಯಕ್ಕಾಗಿ ಕೂಗಿ ಕೊಂಡಿದ್ದನ್ನು ಕೇಳಿದ ಹತ್ತಿರವೇ ಇದ್ದ ಪೊಲೀಸ್ ಠಾಣೆಯ ಪೇದೆಗಳು ಸಹಾಯಕ್ಕಾಗಿ ಧಾವಿಸಿದಾಗ ಬಾಲಕ ಸಿಕ್ಕಿ ಬಿದ್ದಿದ್ದ. ಆತನ ಸಹಾಯದಿಂದ ಎರಡು ದಿನಗಳ ಬಳಿಕ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
 
ಈಗ ಬರೊಬ್ಬರಿ 14 ವರ್ಷಗಳ ಬಳಿಕ ಕೋರ್ಟ್ ಅವರಿಗೆ ಶಿಕ್ಷೆಯನ್ನು ಪ್ರಕಟಿಸಿದೆ. 

ವೆಬ್ದುನಿಯಾವನ್ನು ಓದಿ