ಮೊಬೈಲ್ ಕದ್ದ ಶಂಕೆ: ನಾಲ್ವರು ಯುವಕರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್

ಶುಕ್ರವಾರ, 21 ಅಕ್ಟೋಬರ್ 2016 (16:33 IST)
ಮೊಬೈಲ್ ಕದ್ದಿದ್ದಾರೆಂದು ಆರೋಪಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಯುವಕರ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ನೀಡಿ ಚಿತ್ರಹಿಂಸೆಗೆ ಒಳಪಡಿಸಿದ ಘಟನೆ ಬಹಳ ತಡವಾಗಿ ವರದಿಯಾಗಿದೆ. ಸಮಾಜವಾದಿ ಪಕ್ಷದ ಹಾಜಿ ಎಹ್ಸಾನ್ ಕುರೇಶಿಯ ಸಹೋದರ ರಿಜ್ವಾನ್ ಕುರೇಶಿ ಮತ್ತು ಆತನ ಸಹಚರರು ಈ ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ನಾಲ್ವರ ಮೇಲೆ ಕೇಸ್ ದಾಖಲಿಸಲಾಗಿದೆ. 
 
ಪೀಡಿತರನ್ನು 17 ವರ್ಷದ ಝಹೀರ್ ಬೇಗ್ (17), ಗುಲ್ಜರ್ (16) ಫಿಮೋ(25) ಫಿರೋಜ್(25) ಎಂದು ಗುರುತಿಸಲಾಗಿದ್ದು, ಕಳೆದ ಶುಕ್ರವಾರ ಈ ಘಟನೆ ನಡೆದಿದೆ. 
 
ಹಾಲಿನ ಡೈರಿ ಮಾಲೀಕನಾದ ರಿಜ್ವಾನ್ ಕುರೇಶಿ ಮೊಬೈಲ್ ಕಳ್ಳತನವಾಗಿತ್ತು. ಈ ನಾಲ್ವರು ಯುವಕರೇ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ ಎಂಬ ಶಂಕೆಯ ಮೇಲೆ ಅವರನ್ನು ತನ್ನ ಅಂಗಡಿಗೆ ಕರೆಸಿದ ರಿಜ್ವಾನ್, ತನ್ನ ಸ್ನೇಹಿತರಾದ ಅಖಿಲ್ ಮತ್ತು ನದೀಮ್ ಜತೆ ಸೇರಿಕೊಂಡು ಮನಬಂದಂತೆ ಚಿತ್ರಹಿಂಸೆ ನೀಡಿ, ಬೈಕ್‌ನಿಂದ ಪಶುಗಳಿಗೆ ನೀಡಲಾಗುವ ಸಿರಿಂಜ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ನಾಲ್ವರ ಗುಪ್ತಾಂಗಕ್ಕೆ ಹಲವು ಬಾರಿ ಚುಚ್ಚಿದ್ದಾರೆ. ಅದಾದ ಕೆಲವೇ ಕ್ಷಣದಲ್ಲಿ ಯುವಕರು ತಾವಿದ್ದ ಸ್ಥಳದಲ್ಲಿಯೇ ಬಿದ್ದು ವಿಲವಿಲನೆ ಒದ್ದಾಡಿ ಪ್ರಜ್ಞೆ ಕಳೆದುಕೊಂಡಿದ್ದಾರೆ.
 
ದಾರಿಹೋಕರು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದರು. ಅದರಲ್ಲಿ ಝಹೀರ್ ಬೇಗ್  ಮತ್ತು  ಗುಲ್ಜರ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ