ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿಗೆ ಶುರುವಾಯ್ತಾ ಸಂಕಷ್ಟ..?

ಸೋಮವಾರ, 6 ಮಾರ್ಚ್ 2017 (19:50 IST)
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವಿಳಂಬ ಕುರಿತಂತೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳಿಸಲು ಎರಡು ಪ್ರಕರಣಗಳನ್ನ ಆರೋಪಿಗಳನ್ನ ಜಂಟಿಯಾಗಿ ವಿಚಾರಣೆ ನಡೆಸುವ ಇಚ್ಚೆ ವ್ಯಕ್ತಪಡಿಸು, ತಾಂತ್ರಿಕ ಕಾರಣಗಳಿಂದಾಗಿ ಆಪಾದಿತರ ವಿರುದ್ಧದ ಆರೋಪ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.


ಸುಪ್ರೀಂಕೋರ್ಟ್ ಹೇಳಿರುವ ವಿಷಯಗಳನ್ನ ಗಮನಿಸಿದರೆ ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾಭಾರತಿ ಸೇರಿದಂತೆ ಇತರೆ ಆರೋಪಿಗಳು ಸಂಚಿನ ಆರೋಪದಡಿ ವಿಚಾರಣೆ ಎದುರಿಸಬೇಕಾಗುತ್ತದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾಣಿ, ಜೋಶಿ, ಉಮಾಭಾರತಿ, ಅಂದಿನ ಉತ್ತರಪ್ರದೇಶ ಸಿಎಂ ಕಲ್ಯಾಣ್ ಸಿಂಗ್ ಸೇರಿದಂತೆ ಇತರೆ ಆರೋಪಿಗಳನ್ನ ಖುಲಾಸೆಗೊಳಿಸಿದ್ದ ಅಲಹಾಬಾದ್ ಕೋರ್ಟ್ ತೀರ್ಪನ್ನ ಪ್ರಶ್ನಿಸಿ, ಸಿಬಿಐ ಮತ್ತು ಹಾಜಿ ಮಹಮ್ಮದ್ ಅಹಮ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಸಿ. ಘೋಷ್ ಮತ್ತು ಆರ್.ಎಫ್. ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ವಿಳಂಬವನ್ನ ಪ್ರಶ್ನಿಸಿದೆ.

ಮಾರ್ಚ್ 22ಕ್ಕೆ ಮುಂದಿನ ವಿಚಾರಣೆ ಇದ್ದು, ಅಂದು ಸುಪ್ರೀಂಕೋರ್ಟ್ ರಾಯಬರೇಲಿ ಮತ್ತು ಲಖನೌದ ಎರಡೂ ಪ್ರಕರಣಗಳನ್ನ ಜಂಟಿಯಾಗಿ ವಿಚಾರಣೆ ಸೇರಿದಂತೆ ತನ್ನ ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ