ಗೆಳೆಯರು ಪರಸ್ಪರ ಗೂಢಾಚಾರಿಕೆ ಮಾಡೋಲ್ಲ: ಕೆರ್ರಿಗೆ ಸುಷ್ಮಾ ಟಾಂಗ್

ಶುಕ್ರವಾರ, 1 ಆಗಸ್ಟ್ 2014 (19:02 IST)
ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ ತಮ್ಮ ಪಕ್ಷವನ್ನು( ಬಿಜೆಪಿ) ಗುರಿ  ಮಾಡಿಕೊಂಡು ಗುಢಾಚಾರಿಕೆ ಮಾಡಿರುವುದರ ವಿರುದ್ಧ  ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರಲ್ಲಿ ದೂರಿದ್ದೇನೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಆ  ಕುರಿತು ವರದಿ ಬಂದಾಗ ಭಾರತೀಯರು ತುಂಬ ಕೋಪಗೊಂಡಿದ್ದರು. ಎರಡು ದೇಶಗಳು  ತಾವು ಸ್ನೇಹಿತರು ಎಂದು ಒಪ್ಪಿಕೊಂಡಿದೇವೆ. ಸ್ನೇಹಿತರು ಪರಷ್ಪರ ಗೂಢಚಾರಿಕೆ ಮಾಡುವುದಿಲ್ಲ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ಸುಷ್ಮಾ ಹೇಳಿದ್ದಾರೆ. 
 
ಮುಂದಿನ ತಿಂಗಳು ತಮ್ಮ ದೇಶದಲ್ಲಿ ನಡೆಯಲಿರುವ ಮೋದಿ ಮತ್ತು ಒಬಾಮಾ ಮಾತುಕತೆಗೆ ಪೂರ್ವಭಾವಿಯಾಗಿ ಭಾರತಕ್ಕೆ ಬಂದಿರುವ  ಕೆರ್ರಿ ಅವರ ಭಾರತ ಭೇಟಿ  ಎರಡು ದೇಶಗಳ ನಡುವೆ ಮಹತ್ವದ, ಉನ್ನತ ಮಟ್ಟದ  ಸಂಬಂಧಕ್ಕೆ ಪ್ರಥಮ ಹೆಜ್ಜೆ ಎನಿಸಿದೆ. ಸುಷ್ಮಾ ಮಾತಿಗೆ ಪ್ರತಿಕ್ರಿಯಿಸಿರುವ ಅವರು ಅಧ್ಯಕ್ಷ  ಗುಪ್ತಚರ ಪ್ರಕರಣದ ಬಗ್ಗೆ ಅಧ್ಯಕ್ಷ ಒಬಾಮಾ ಪುನರ್ ವಿಮರ್ಶೆ ಕೈಗೊಂಡಿದ್ದಾರೆ " ಎಂದಿದ್ದಾರೆ. 
 
ಕಳೆದ ಜುಲೈನಲ್ಲಿ,  ವಾಷಿಂಗ್ಟನ್ ಪೋಸ್ಟ್  ಅನಾವರಣಗೊಳಿಸಿದ ವರ್ಗೀಕರಿಸಿದ ಡಾಕ್ಯುಮೆಂಟ್  ಮೇ ತಿಂಗಳಲ್ಲಿ ನಡೆದ  ರಾಷ್ಟ್ರೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ, 2010 ರಲ್ಲಿ  ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಎನ್ಎಸ್ಎ  ಅಧಿಕೃತ ಗುರಿಗಳಲ್ಲಿ ಒಂದಾಗಿತ್ತು ಎಂಬ ಸತ್ಯವನ್ನು ಬಿಚ್ಚಿಟ್ಟಿದೆ. 

ವೆಬ್ದುನಿಯಾವನ್ನು ಓದಿ