ಗ್ಯಾಂಗ್‌ರೇಪ್ ಪ್ರಕರಣ: ಕೋರ್ಟ್ ಮುಂದೆ ಹೇಳಿಕೆ ನೀಡಿದ ಡಚ್ ಮಹಿಳೆ

ಬುಧವಾರ, 1 ಜುಲೈ 2015 (15:38 IST)
ಕಳೆದ ವರ್ಷ ಎಂಟು ಜನ ಆರೋಪಿಗಳಿಂದ ಗ್ಯಾಂಗ್‌ರೇಪ್‌ಗೊಳಗಾಗಿದ್ದ ಡಚ್ ದೇಶದ ಮಹಿಳೆ ಇಂದು ದೆಹಲಿ ಹೈಕೋರ್ಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ.
 
ದೆಹಲಿ ಕೋರ್ಟ್ ನೀಡಿದ ಸಮನ್ಸ್ ಮೇರೆಗೆ ಡೆನ್ಮಾರ್ಕ್‌ನಿಂದ ಇಂದು ಕೋರ್ಟ್‌ಗೆ ಆಗಮಿಸಿದ ಮಹಿಳೆ ಹೆಚ್ಚುವರಿ ನ್ಯಾಯಮೂರ್ತಿ ಕಾವೇರಿ ಬವೇಜಾ ಮುಂದೆ ತಮ್ಮ ಲಿಖಿತ ಹೇಳಿಕೆಯನ್ನು ದಾಖಲಿಸಿದ್ದಾರೆ.  
 
ನವದೆಹಲಿಯ ರೈಲ್ವೆ ನಿಲ್ದಾಣದ ಬಳಿಯಿರುವ ವಿಭಾಗೀಯ ರೈಲ್ವೆ ಆಫೀಸರ್ಸ್ ಕ್ಲಬ್ ಬಳಿಯಿರುವ ನಿರ್ಜನ ಪ್ರದೇಶದಲ್ಲಿ 2014ರ ಜನೆವರಿ 14 ರಂದು ಎಂಟು ಮಂದಿ ಆರೋಪಿಗಳು ಡಚ್ ಮಹಿಳೆಯನ್ನು ಅಪಹರಿಸಿ ಚಾಕು ತೋರಿಸಿ ದರೋಡೆ ಮಾಡಿದ್ದಲ್ಲದೇ ಗ್ಯಾಂಗ್‌ರೇಪ್ ಎಸಗಿದ್ದರು. 
 
ಎಂಟು ಮಂದಿ ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿಗಳನ್ನು ಮಹೇಂದ್ರ ಅಲಿಯಾಸ್ ಗಾಂಜಾ(24) ಮೊಹಮ್ಮದ್ ರಾಜಾ(22) ರಾಜು, ಅರ್ಜುನ್, ರಾಜು ಚಕ್ಕಾ ಮತ್ತು ಶ್ಯಾಮ್‌ಲಾಲ್ ಎಂದು ಗುರುತಿಸಲಾಗಿದೆ. 
 

ವೆಬ್ದುನಿಯಾವನ್ನು ಓದಿ