ಬೆಂಗಳೂರು: ಯುವಕರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಬುಧವಾರ, 7 ಅಕ್ಟೋಬರ್ 2015 (15:49 IST)
ಕಾಲ್ ಸೆಂಟರ್ ಮಹಿಳಾ ಉದ್ಯೋಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಯುವಕರ ಮೇಲೆಯೇ  ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.
 

 
ಜೆ.ಪಿ.ನಗರದ ಬಳಿ ಇರುವ ರಾಗಿ ಗುಡ್ಡದ ಬಳಿ ಕಳೆದ ತಿಂಗಳ 29 ರಂದು ಈ ಅಸ್ವಾಭಾವಿಕ  ಘಟನೆ ನಡೆದಿದ್ದು, ಆರೋಪಿಗಳೀಗ ಪೊಲೀಸರ ವಶದಲ್ಲಿದ್ದಾರೆ.
 
ಸೆಪ್ಟೆಂಬರ್ 29ರ ಮಧ್ಯರಾತ್ರಿ 11.30ರ ಸುಮಾರಿಗೆ ಟಿಟಿಯ ಮೇಲೆ ಹೋಗುತ್ತಿದ್ದ ಇಬ್ಬರು ಯುವಕರನ್ನು ರಾಗಿಗುಡ್ಡದ ಬಳಿ ಇಂಡಿಕಾ ಕಾರಿನಲ್ಲಿದ್ದ ಯುವಕರ ಗುಂಪೊಂದು ತಡೆದಿದೆ. ರಾಗಿಗುಡ್ಡದ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಅವರನ್ನು ಎಳೆದೊಯ್ದು ಸತತ 3 ಗಂಟೆಗಳ ಕಾಲ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಕೀಚಕರು ಆ ದೃಶ್ಯಾವಳಿಗಳನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದರೆ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಜತೆಗೆ ಅವರ ಬಳಿ ಇದ್ದ ಹಣವನ್ನು ದೋಚಿಕೊಂಡು ಪಲಾಯನ ಮಾಡಿದ್ದಾರೆ.
 
ಪೀಡಿತರು ಆರೋಪಿಗಳ ಕಾರಿನ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದು, ಮರುದಿನ ಬೆಳಿಗ್ಗೆ ಮೈಕೋ ಲೇಔಟ್ ಠಾಣೆಗೆ ಸುಲಿಗೆ ದೂರನ್ನು ನೀಡಿದ್ದರು. 
 
ಕಾರ್ಯಾಚರಣೆಗಿಳಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ