2013ರಲ್ಲಿ ರೇಪ್ ಎಸಗಿದ ಐವರಿಂದ ಅದೇ ಯುವತಿಯ ಮೇಲೆ ಮತ್ತೆ ರೇಪ್

ಭಾನುವಾರ, 17 ಜುಲೈ 2016 (20:00 IST)
20 ವರ್ಷದ ದಲಿತ ಯುವತಿಯನ್ನು ಐವರು ಪುರುಷರು ರೇಪ್ ಮಾಡಿ ಪೊದೆಗಳ ಹಿಂದೆ ಸಾಯುವುದಕ್ಕೆ ಬಿಟ್ಟಿದ್ದ ಘಟನೆ ಹರ್ಯಾಣದ ರೋಹ್ಟಕ್‌ನಲ್ಲಿ ಸಂಭವಿಸಿದೆ. ಆದರೆ ಆಘಾತಕಾರಿ ವಿದ್ಯಮಾನವೆಂದರೆ 2013ರಲ್ಲಿ ಇದೇ ಆರೋಪಿಗಳು ಆ ಯುವತಿಯ ಮೇಲೆ ರೇಪ್ ಮಾಡಿದ್ದರು.
 
 ಸಂತ್ರಸ್ತೆಯ ಕುಟುಂಬ ಹೇಳಿದ ಪ್ರಕಾರ, 20 ರ ಆಸುಪಾಸಿನಲ್ಲಿರುವ ಈ ಯುವಕರು ಯುವತಿಯ ಮೇಲೆ 2013ರಲ್ಲಿ ರೇಪ್ ಮಾಡಿ ಸಿಕ್ಕಿಬಿದ್ದು ಜಾಮೀನಿನ ಮೇಲೆ ಹೊರಬಂದಿದ್ದರು. ಈ ಯುವಕರು ತಮ್ಮ ವಿರುದ್ಧದ ಕೇಸ್ ಇತ್ಯರ್ಥ ಮಾಡುವಂತೆಯೂ 50 ಲಕ್ಷ ರೂ. ನೀಡುವುದಾಗಿಯೂ ಬೆದರಿಕೆ ಹಾಕಿದ್ದರು.
 
 ನಾನು ಕಾಲೇಜಿನಿಂದ ಹೊರಗೆಬರುತ್ತಿದ್ದಂತೆ ಕಾರಿನಲ್ಲಿದ್ದ ಐವರು ತನ್ನನ್ನು ಒಳಕ್ಕೆ ಎಳೆದು ಪ್ರಜ್ಞೆ ತಪ್ಪಿದ ಮೇಲೂ ರೇಪ್ ಮಾಡಿದರು ಎಂದು ಯುವತಿ ಆಪಾದಿಸಿದ್ದಾಳೆ. ಬಳಿಕ ತನ್ನ ದೇಹವನ್ನು ಪೊದೆಗಳ ಬಳಿ ಎಸೆದುಹೋಗಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 
 
 ನಾವು ಭಿವಾನಿಯಲ್ಲಿ ವಾಸಿಸುತ್ತಿದ್ದು, ಈ ಘಟನೆ ಬಳಿಕ ಇವರಿಂದ ಪಾರಾಗಲು ರೋಹ್ಟಕ್‌ಗೆ ಬಂದಿದ್ದೆವು. ನಾನು ಮಕ್ಕಳಿಗೆ ಶಿಕ್ಷಣ ನೀಡಲು ಬಯಸಿದ್ದೆ ಎಂದು ಯುವತಿಯ ತಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ