ಮಹಿಳೆಯ ಮೇಲೆ ಗ್ಯಾಂಗ್‌ರೇಪ್, ಪ್ರಕರಣ ದಾಖಲಿಸದಿರುವ ಪೊಲೀಸರು

ಗುರುವಾರ, 19 ಫೆಬ್ರವರಿ 2015 (11:23 IST)
ವಿಮಲ(ಹೆಸರು ಬದಲಾಯಿಸಲಾಗಿದೆ) 26 ವರ್ಷದವಳಾಗಿದ್ದು, ಕುಟುಂಬದ ಇತರರು ವಿವಾಹ ಸಮಾರಂಭಕ್ಕೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬಳೇ ಉಳಿದಿದ್ದಳು. ಬರಾಂಪುರ ಗ್ರಾಮದ ಈ ಮಹಿಳೆ ತನ್ನ ಜೀವನದ ಅತೀ ಕೆಟ್ಟ ಗಳಿಗೆಗೆ  ಸಾಕ್ಷಿಯಾಗುತ್ತಾಳೆಂದು ಭಾವಿಸಿರಲಿಲ್ಲ. ಹೊರಗಡೆಯಿಂದ ಪತಿ ಕರೆ ಮಾಡುತ್ತಿದ್ದಾರೆಂದು ಭಾವಿಸಿದ ಮಹಿಳೆ ಬಾಗಿಲು ತೆಗೆದಿದ್ದೇ ತಪ್ಪಾಯಿತು.

ಮೂವರು ಅವಳ ಎದುರಿಗೆ ನಿಂತಿದ್ದರು. ಅವಳು ಪ್ರತಿಕ್ರಿಯಿಸುವುದಕ್ಕೆ ಮುಂಚೆಯೇ ಅವಳ ಮೈಮೇಲೆ ಬಿದ್ದ ಮೂವರು ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಒಬ್ಬರಾದ ಮೇಲೆ ಒಬ್ಬರು ರೇಪ್ ಮಾಡಿದರು. ಅವಳು ಪ್ರತಿರೋಧ ತೋರಿದ್ದರಿಂದ ನಿರ್ದಯವಾಗಿ ಥಳಿಸಿದರು. ತೀವ್ರ ಥಳಿತದಿಂದ ಮತ್ತು ಸಾಮೂಹಿಕ ರೇಪ್‌ನಿಂದ ಮಹಿಳೆ ಪ್ರಜ್ಞೆ ತಪ್ಪಿದಳು.ಅವಳು ಸತ್ತೇಹೋದಳೆಂದು ಭಾವಿಸಿದ ದುಷ್ಕರ್ಮಿಗಳು ನದಿಯ ಸೇತುವೆಯಿಂದ 50 ಅಡಿ ಎತ್ತರದಿಂದ ಕೆಳಕ್ಕೆ ಎಸೆದರು.

ಇದರಿಂದ ಅವಳ ಕಾಲು ಮುರಿದರೂ ತಕ್ಷಣವೇ ಅವಳಿಗೆ ಪ್ರಜ್ಞೆ ಮರಳಿತು. ದುಷ್ಕರ್ಮಿಗಳು ಆ ಜಾಗ ಬಿಟ್ಟಿದ್ದರಿಂದ ನದಿ ದಂಡೆಗೆ ತೆವಳಿಕೊಂಡು ಬಂದ ಮಹಿಳೆ ಸಹಾಯಕ್ಕಾಗಿ ಕಿರುಚಿದಳು.  ಅವಳ ಕೂಗಾಟ ಕೇಳಿ ಜನರು ಸೇರಿದರು. ಪತಿಗೆ ಮೊಬೈಲ್ ಫೋನ್ ಒಂದರಿಂದ ಕರೆ ಮಾಡಿದಾಗ ಅವನು ಸ್ಥಳಕ್ಕೆ ಧಾವಿಸಿದ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲು ಕರೆದುಕೊಂಡು ಹೋದ.

ಮಹಿಳೆಯ ಹೇಳಿಕೆ ಮತ್ತು ಸ್ಥಿತಿಗತಿಯ ಆಧಾರದ ಮೇಲೆ ಪೊಲೀಸರು ಗ್ಯಾಂಗ್ ರೇಪ್ ದಾಖಲು ಮಾಡಿ ದುಷ್ಕರ್ಮಿಗಳ ಪತ್ತೆಗೆ ಯತ್ನಿಸಬೇಕಿತ್ತು. ಆದರೆ ಅವಳ ಪುನರಾವರ್ತಿತ ಮನವಿ ನಡುವೆಯೂ ಪೊಲೀಸರು ರೇಪ್ ಕೇಸ್ ದಾಖಲು ಮಾಡಲು ನಿರಾಕರಿಸಿದರು.

ವೆಬ್ದುನಿಯಾವನ್ನು ಓದಿ