ಅತ್ಯಾಚಾರಕ್ಕೊಳಗಾಗಿದ್ದಕ್ಕೆ ನೊಂದು ಬಾಲಕಿ ಆತ್ಮಹತ್ಯೆ

ಬುಧವಾರ, 6 ಮೇ 2015 (15:09 IST)
ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿಯೊಬ್ಬಳು ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ  ಜೈಸಲ್ಮೇರ್‌ಗೆ ಸೇರಿದ ರೈಮಾಲಾ ಎಂಬ ಗ್ರಾಮದಲ್ಲಿ ನಡೆದಿದೆ. 

ಘಟನೆಗೆ ಸಂಬಂಧಿಸಿದಂತೆ ಶ್ರೀಗಂಗಾನಗರ್ ಜಿಲ್ಲೆಯ ನಿವಾಸಿಯಾಗಿರುವ ಆರೋಪಿ ಯುವಕ ಆತ್ಮಾರಾಮ್ (22) ನನ್ನು  ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 
 
ಎಪ್ರಿಲ್ 29 ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಬಾಲಕಿ ಒಬ್ಬಳೇ ಇರುವುದನ್ನು ಕಂಡುಕೊಂಡ ಆರೋಪಿ ಆಕೆಯ ಮನೆಯೊಳಗೆ ನುಗ್ಗಿ ಅತ್ಯಾಚಾರ ಎಸಗಿದ್ದ. ಇದರಿಂದ ನೊಂದ ಬಾಲಕಿ ಸೀಲಿಂಗ್ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
 
ಮೃತ ಬಾಲಕಿಯ ದೇಹಕ್ಕೆ ಅಂದೇ ಅಂತ್ಯಸಂಸ್ಕಾರ ಮಾಡಿದ ಪೋಷಕರು ಮೇ 3ರಂದು ಪ್ರಕರಣವನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ