ಕಿರಿಯ ಸಹೋದರಿ ಮುಂದೆ ಅಕ್ಕನ ಮೇಲೆ ಸಾಮೂಹಿಕ ಅತ್ಯಾಚಾರ

ಶನಿವಾರ, 29 ಆಗಸ್ಟ್ 2015 (16:25 IST)
15 ವರ್ಷದ ಬಾಲಕಿಯ ಮೇಲೆ ಆಕೆಯ ಕಿರಿಯ ಸಹೋದರಿಯ ಮುಂದೆಯೇ ಸಾಮೂಹಿಕ ಅತ್ಯಾಚಾರ ನಡೆದ ಕರಾಳ ಘಟನೆ  ರುಖ್ರಿ ಎಂಬ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೀಡಿತೆ 9ನೇ ತರಗತಿ ಬಾಲಕಿಯಾಗಿದ್ದು, ಆಕೆಯ 13 ವರ್ಷದ ಸಹೋದರಿ ಮುಂದೆ ಈ ಕುಕೃತ್ಯ ನಡೆದಿದೆ. ಅವರಿಬ್ಬರನ್ನು ಬೆದರಿಸಿ ಕೋಣೆಯೊಂದಕ್ಕೆ ಕರೆದೊಯ್ದು ದುರುಳರು ಕಿರಿಯವಳಿಗೆ ಅಮಲೇರಿಸುವ ಪದಾರ್ಥವನ್ನು ನೀಡಿ ಹಿರಿಯವಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಿರ್ಮೋರ್ ಪೊಲೀಸ್ ಅಧೀಕ್ಷಕರಾದ ಸೌಮ್ಯ ಸಾಂಬಶಿವನ್ ತಿಳಿಸಿದ್ದಾರೆ. 
 
ಪ್ರಕರಣದ ಕುರಿತು ಮಾಹಿತಿ ಪಡೆದ ಪೋಲೀಸರು ತ್ವರಿತಗತಿಯಲ್ಲಿ ಕಾರ್ಯಚಾರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಆರೋಪಿಗಳನ್ನು ಅಜಯ್ ಕುಮಾರ್(31), ಸನ್ನಿ ಕುಮಾರ್(31)  ಮತ್ತು ಮೋನು ಎಂದು ಗುರುತಿಸಲಾಗಿದೆ. 
 
ಭಾರತೀಯ ದಂಡಸಂಹಿತೆ 363, 366, 342, 323, 376D, 506, 120ಬಿ ಮತ್ತು ಪೋಸ್ಕೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ