ತಾಯಿಯ ಮೃತದೇಹ ಮನೆಯಲ್ಲಿದ್ದಾಗಲೇ ಪರೀಕ್ಷೆಗೆ ತೆರಳಿದ ಬಾಲಕಿ

ಗುರುವಾರ, 24 ಮಾರ್ಚ್ 2016 (01:09 IST)
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ಬಾಲಕಿ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೋಗುವುದೇ ಅಥವಾ ಮೃತರಾಗಿದ್ದ ತನ್ನ ತಾಯಿಯ ಎದುರು ಕುಳಿತುಕೊಂಡು ಗಟ್ಟಿಯಾಗಿ ಅಳುವುದೇ? ಆದರೆ ಬಾಲಕಿ ತಾಯಿಯ ಡೆಡ್ ಬಾಡಿಯನ್ನು ಬಿಟ್ಟು ಪರೀಕ್ಷೆಯ ಬರೆಯುವ ಮೊದಲ ಆಯ್ಕೆ ಮಾಡಿಕೊಂಡಳು. ತನ್ನ ತಾಯಿ ನಿರ್ಮಲಾ ಇದ್ದಕ್ಕಿದ್ದಂತೆ ಸ್ಟ್ರೋಕ್‌ನಿಂದ ಕುಸಿದುಬಿದ್ದು ಕಣ್ಣಮುಂದೆಯೇ ಕೊನೆಯುಸಿರೆಳೆದಿದ್ದನ್ನು ಕರಣಮ್ ಜಯಶ್ರೀ  ಕಂಡಳು. ಸೋಮವಾರ ತನ್ನ ಪ್ರಥಮ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟಿದ್ದಳು. 
 
ತಾಯಿಯ ಸಾವಿನಿಂದ ಹೃದಯ ಒಡೆದಂತಾದರೂ ಧೈರ್ಯತುಂಬಿಕೊಂಡ ಬಾಲಕಿ ಎಲ್ಲಾ ಪತ್ರಿಕೆಗಳಲ್ಲಿ ಚೆನ್ನಾಗಿ ಮಾಡುವಂತೆ ತಾಯಿಯ ಬಯಕೆ ಈಡೇರಿಸುವುದಕ್ಕಾಗಿ ಪರೀಕ್ಷೆಗೆ ಹೋದಳು.  ಕೆಲವು ಬಂಧುಗಳು ಈ ಕುರಿತು ಬೇಸರ ವ್ಯಕ್ತಪಡಿಸಿ ಆಶ್ಚರ್ಯಚಕಿತರಾಗಿ ನೋಡಿದರು. ಆದರೆ ಬಾಲಕಿಗೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಬೇಕೆಂಬ ಒಂದೇ ಗುರಿ ಇರಿಸಿಕೊಂಡಿದ್ದಳು.

ಜೀವಕೋಣ ಪ್ರದೇಶದ ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆಯನ್ನು ಬರೆದಳು.ಪರೀಕ್ಷೆ ಮುಗಿದ ಕೂಡ ಬಾಲಕಿ ಗಟ್ಟಿಯಾಗಿ ಅಳತೊಡಗಿದಳು. ಪರೀಕ್ಷಾ ಸಿಬ್ಬಂದಿ ಅವಳಿಗೆ ನೀರು ಕೊಟ್ಟು ಸಮಾಧಾನಪಡಿಸಿದರು. ತನ್ನ ತಾಯಿ ಇಚ್ಛೆ ಪೂರೈಸಲು ಪರೀಕ್ಷೆ ಬರೆದಿದ್ದಾಗಿ ಹೇಳಿದಳು. 

ವೆಬ್ದುನಿಯಾವನ್ನು ಓದಿ