25 ವರ್ಷದ ಮಹಿಳೆಯನ್ನು ವಿವಾಹವಾದ ಕಾಲೇಜು ವಿದ್ಯಾರ್ಥಿನಿ

ಗುರುವಾರ, 28 ಜನವರಿ 2016 (21:37 IST)
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು 25 ವರ್ಷದ ಮಹಿಳೆಯನ್ನು ಅನಧಿಕೃತವಾಗಿ ವಿವಾಹವಾದ ಘಟನೆ ವರದಿಯಾಗಿದೆ.
 
ಕಂಪ್ಯೂಟರ್ ಸೈನ್ಸ್‌ನಲ್ಲಿ ಅಂತಿಮ ವರ್ಷ ಓದುತ್ತಿದ್ದ ವಿದ್ಯಾರ್ಥಿನಿ ಜನೆವರಿ  4 ರಂದು ಕಾಣೆಯಾಗಿದ್ದಳು. ಜನೆವರಿ 15 ರಂದು ಪುತ್ರಿಯನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ಆಕೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
 
ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ, ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್ ಕರೆಗಳ ಆಧರಿಸಿ ತನಿಖೆ ನಡೆಸಿದಾಗ ಆಕೆ ಮಹಿಳೆಯೊಂದಿಗೆ ದೇವ್ರಿ ಬಡಾವಣೆಯಲ್ಲಿ ವಾಸವಾಗಿರುವುದು ಪತ್ತೆಯಾಗಿದೆ. 
 
ಮೂರು ದಿನಗಳ ಹಿಂದೆ, ವಿದ್ಯಾರ್ಥಿನಿ ಮತ್ತು ದೇವ್ರಿ ಬಡಾವಣೆಯಲ್ಲಿ ಕಾಸ್ಮೆಟಿಕ್ ಶಾಪ್ ಹೊಂದಿರುವ 25 ವರ್ಷದ ಮಹಿಳೆ ಕೋರ್ಟ್‌ಗೆ ಹಾಜರಾಗಿ ತಮ್ಮ ವಿವಾಹ ಪತ್ರದ ಅಫಿಡವಿಟ್ ಸಲ್ಲಿಸಿದ್ದಾರೆ.
 
ದೇಶದಲ್ಲಿ ಲೆಸ್ಬಿಯನ್ ವಿವಾಹ ಕಾನೂನುಬಾಹಿರವಾಗಿದೆ. ಆದಾಗ್ಯೂ ಇಬ್ಬರು ವಯಸ್ಕರಾಗಿದ್ದರಿಂದ ಅವರು ಜೊತೆಯಾಗಿ ಇರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ